ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಹಾಗು ಪೊಂಪೈ ಕಾಲೇಜು ಐಕಳ ಇದರ ಸಹಭಾಗಿತ್ವದಲ್ಲಿ ಮಂಗಳವಾರ ಜಾನಪದ ಜ್ಞಾನೋತ್ಸವ ಹಾಗು ಜಾನಪದ ರಸಪ್ರಶ್ನೆ ಕಾರ್ಯಕ್ರಮ ಪೊಂಪೈ ಕಾಲೇಜಿನಲ್ಲಿ ಅದ್ದೂರಿ ಆಗಿ ನಡೆಯಿತು .

ಕೆ.ಭುವನಾಭಿರಾಮ ಉಡುಪ ಅವರು ಉದ್ಗಾಟನೆ ಮಾಡಿ ಶುಭ ಹಾರೈಸಿದರು ಶ್ರೀಶ್ರೀ ಹರಿನಾರಾಯಣ ದಾಸ ಅಸ್ರಣ್ಣರು ಆಶೀರ್ವಚನ ನೀಡಿ ಜಾನಪದ ದ ಉಳಿವಿನ ಬಗ್ಗೆ ಮಾತಾಡಿದರು ಸಭಾ ಅಧ್ಯಕ್ಷತೆ ನೆಲೆಯಲ್ಲಿ , ರೆ.ಫಾ ಓಸ್ವಾಲ್ಡ್ ಮೊಂತೆರೊ ಸಂಚಾಲಕರು ಪೊಂಪೈ ಕಾಲೇಜು ಅವರು ವಿದ್ಯಾರ್ಥಿ ಗಳಿಗೆ ಜಾನಪದ ದ ಅರಿವು ಕಾರ್ಯಕ್ರಮ ಅತ್ಯಗತ್ಯ ಹಿಂದಿನ ಕಾಲದಲ್ಲಿ ಹಿರಿಯರಿಂದ ಜಾನಪದ ಸಂಸ್ಕ್ರತಿ ಯ ಬಗ್ಗೆ ವಿವರಿಸಿದರು.
ಈಗಿನ ಮಕ್ಕಳಿಗೆ ಮೊಬೈಲ್ ಯುಗ ಆದ್ದರಿಂದ ಇಂಥ ಕಾರ್ಯಕ್ರಮ ಮಕ್ಕಳಿಗೆ ಜಾನಪದದ ಅರಿವು ಮೂಡಿಸುವಲ್ಲಿ ಉತ್ತಮವಾಗಿದೆ ಎಂದರು. ತುಳುವರ್ಲ್ಡ್ ಡಾ.ರಾಜೇಶ್ ಆಳ್ವ ಅವರು ದಿಕ್ಸೂಚಿ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಜಾನಪದ ದ ಅರಿವು ಮೂಡಿಸಿದರು . ಪ್ರಾಂಶುಪಾಲರಾದ ಕೆ.ಪುರುಷೋತ್ತಮ ಅವರು ಕಾರ್ಯಕ್ರಮಕ್ರಮಕ್ಕೆ ಶುಭ ಹಾರೈಸಿದರು ಸಭಾ ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳಿಗೆ ಜಾನಪದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .
ವಿಜೇತರಿಗೆ ಅಗರಿ ರಾಘವೇಂದ್ರ ರಾವ್ ಅವರಿಂದ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಕ.ಜಾ.ಪ ದಕ್ಷಿಣ ಕನ್ನಡ ಅಧ್ಯಕ್ಷರಾದ ಪ್ರವೀಣಕುಮಾರ್ ಕೊಡಿಯಾಲ್ ಬೈಲ್. ಕ.ಜಾ.ಪ ಮೂಡುಬಿದಿರೆ ಘಟಕದ ಪದ್ಮಶ್ರೀ ಭಟ್ ನಿಡ್ಡೋಡಿ , ಅಗರಿ ರಾಘವೇಂದ್ರ ರಾವ್ ,ಚಂದ್ರಹಾಸ ದೇವಾಡಿಗ ,ರೋಹನ್ ಡಿಕೋಸ್ತ ಉಪಾಧ್ಯಕ್ಷರು ,ಚರ್ಚ್ ಪಾಲನಾ ಮಂಡಳಿ ಕಿರೇಂ ಚರ್ಚ್ ದಾಮಸ್ ಕಟ್ಟೆ ಭಾನುಮತಿ ಶೆಟ್ಟಿ ಎಡ್ವರ್ಡ್ ಸಾರಂಗ್ ,ಆರ್ಯನ್ ಸವಣಾಲ್ ದಯಾಮಣಿ ,ಎಕ್ಕಾರು ಬಸವರಾಜ ಮಂತ್ರಿ ದೀನ್ ರಾಜ್ ಭಾಸ್ಕರ ದೇವಾಡಿಗ ,ಮಂದಾರ ರಾಜೇಶ್ ಭಟ್ , ವಿಜಯಕುಮಾರ್ ಜೈನ್ ,ಸತೀಶ್ ಅಬ್ಬನಡ್ಕ ,ಚೇತನಾ, ರಾಜೇಂದ್ರ ಹಗ್ಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು . ಮಲ್ಲಿಕಾ ಸುಖೇಶ್ ಧನ್ಯವಾದ ವಿತ್ತರು.

