ಯೋಗದಯಮ, ನಿಯಮ,ಸೂಚನೆ ಪಾಲಿಸಿ ನಿಯಮಿತವಾಗಿ ಯೋಗಅಭ್ಯಾಸ ಮಾಡಿ : ಸ್ವಾಮಿಜಿತಕಾಮನಂದಜೀ ಮಹಾರಾಜ್

0
15

ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿಫೆಬ್ರವರಿತಿಂಗಳ ಸಂಜೆಯ [5 ಗಂಟೆಯ]ಶಿಬಿರವನ್ನು ಆಶ್ರಮದಅಧ್ಯಕ್ಷ ಶ್ರೀ ಸ್ವಾಮಿಜಿತಕಾಮಾನಂದಜೀ ಮಹಾರಾಜ್‌ಉದ್ಘಾಟಿಸಿ, ತಮ್ಮ ಆಶೀರ್ವಚನದಲ್ಲಿ ಯೋಗವು ಪ್ರಾಚೀನದಿಂದಲೂದೈಹಿಕ, ಮಾನಸಿಕ ಮತ್ತುಆಧ್ಯಾತ್ಮಿಕಅಭ್ಯಾಸವಾಗಿದ್ದು, ಜನರಿಗೆ ಶಾಂತತೆ, ಶಾಂತಿ, ಆತ್ಮವಿಶ್ವಾಸ ಮತ್ತುಧೈರ್ಯವನ್ನು ನೀಡುತ್ತದೆ.ಯೋಗದಯಮ , ನಿಯಮ,ಸೂಚನೆಪಾಲಿಸಿನಿಯಮಿತವಾಗಿಯೋಗಅಭ್ಯಾಸ ಮಾಡಿ. ಯೋಗದ ಮೊದಲ ಮೆಟ್ಟಿಲು “ಯಮ”ವನ್ನು ಆಚರಿಸಿದರೆ ಮಾನಸಿಕ ಶುದ್ಧಿಯಾಗಿ ನೈತಿಕ ಸುಧಾರಣೆಯಾಗುವುದು. ಇದು ವ್ಯಕ್ತಿಗೆ ಮತ್ತು ಸಮಾಜಕ್ಕೆಅನ್ವಯವಾಗುತ್ತದೆ. ಯೋಗ ಸಾಧನೆಯಎರಡನೇ ಮೆಟ್ಟಿಲು “ನಿಯಮ” ಶಾರೀರಿಕ ಹಾಗೂ ಮಾನಸಿಕ ನಡವಳಿಕೆಯ ಮೂಲಕ ದೈಹಿಕ ಮತ್ತು ಮಾನಸಿಕ ಏಳಿಗೆಯಾಗಿ ಆರೋಗ್ಯ ವರ್ಧನೆಯಾಗುವುದುಎಂದು ತಿಳಿಸಿದರು.

ದೇಲಂಪಾಡಿಯೋಗ ಪ್ರತಿಷ್ಠಾನದÀಯೋಗಗುರುಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವದ ಪ್ರಯೋಜನಗಳನ್ನು ತಿಳಿಸಿದರು.ಶಿಬಿರದಲ್ಲಿ ಪ್ರಾರ್ಥನೆ, ಧ್ಯಾನ, ಅಷ್ಟಾಂಗ ಯೋಗದ ಮಾಹಿತಿ, ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ,ಆಸನಗಳು, ಪ್ರಾಣಾಯಾಮ ಹಾಗೂ ಯಾವ ಕಾಯಿಲೆಗೆ ಯಾವಯೋಗ, ಮಂತ್ರ ಮುದ್ರೆಗಳು ತಿಳಿಸಿಕೊಡಲಾಗುವುದು. ಯೋಗಚಕ್ರದ ಮಾಹಿತಿ, ವರ್ಣಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದುಎಂದು ಶ್ರೀ ದೇಲಂಪಾಡಿಯವರು ಶಿಬಿರದ ಮಾಹಿತಿ ತಿಳಿಸಿದರು.

ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ, ಮತ್ತು ಪ್ರೆಮಉಪಸ್ಥಿತರಿದ್ದರು.

ಆಸಕ್ತರುಯೋಗ ಶಿಬಿರದಲ್ಲಿ ನೋಂದಾಯಿಸಿಕೊಳ್ಳಲು ಆಶ್ರಮದಕಾರ್ಯಾಲವನ್ನು ಸಂಪರ್ಕಿಸಬಹುದು. ಸಂಪರ್ಕ: 0824-2414412

LEAVE A REPLY

Please enter your comment!
Please enter your name here