ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಳತ್ತೂರು ನಡಿಯಾಲ್ ಬಳಿ ಕಾಲುದಾರಿ ಕುಸಿತವಾಗಿದ್ದು ನಡೆದಾಡಲು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಶ್ರೀ ದೇವರ ಜಳಕದ ಗುಂಡಿ ಬಳಿಯ ಕಾಲುದಾರಿ ಬದಿ ಭಾರೀ ಮಳೆಗೆ ಮಣ್ಣು ಹಾಗೂ ಭಾರೀ ಗಾತ್ರದ ಮರ ಕೂಡಾ ಕೊಚ್ಚಿ ಹೋಗಿ ಕುಸಿತವಾಗಿದೆ. ಈ ಭಾಗದಲ್ಲಿ ನಡಿಯಾಲ್ ಪರಿಸರದ ಅನೇಕ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನಡೆದುಕೊಂಡು ಹೋಗುತ್ತಿದ್ದು ಕಾಲುದಾರಿ ಕುಸಿತದ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥ ವೇಣುಗೋಪಾಲ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.