ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಭಾರತರತ್ನ ದಿ. ಇಂದಿರಾ ಗಾಂಧಿ ಜಯಂತಿ ಆಚರಣೆ

0
40

ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಗರೀಭಿ ಹಠಾವೊ, ಉಳುವವನೆ ಹೊಲದೊಡೆಯ, ಬ್ಯಾಂಕ್ ರಾಷ್ಟ್ರೀಕರಣ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಕೀರ್ತಿ ದಿ. ಶ್ರೀಮತಿ ಇಂದಿರಾ ಗಾಂಧಿಯವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಡವರ ಪರವಾಗಿ, ಜನ ಸಾಮಾನ್ಯರ ಪರವಾಗಿ ಇಂದಿರಾ ಅವರ ನಿಲುವು, ಅಭಿವೃದ್ಧಿ ಪರವಾದ ಚಿಂತನೆಗಳು ವಿವಿಧ ರೂಪದಲ್ಲಿ ಇಂದಿಗೂ ಜಾರಿಯಲ್ಲಿದೆ, ಅಂತಾ ಮಹಾನ್ ವ್ಯಕ್ತಿತ್ವವನ್ನು ನೆನೆಯುವುದು ಸ್ಥುತ್ಯರ್ಹ ಎಂದು ಅವರು ಹೇಳಿದರು.

ಹಿರಿಯ ಕಾಂಗ್ರೆಸಿಗರಾದ ಸುಂದರ ಸಮಗಾರ ಸಾಣೂರು ಅವರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಅತಿಥಿಗಳನ್ನು ಸ್ವಾಗತಿಸಿ ಇಂದಿರಾ ಗಾಂಧಿ ಜಯಂತಿ ಆಚರಣೆಯ ಕುರಿತು ಪ್ರಸ್ತಾವಿಕ ಮಾತನಾಡಿ ಕೋಟ್ಯಾಂತರ ಜನರಿಗೆ ಸ್ವಂತ ಭೂಮಿಯ ಹಕ್ಕನ್ನು ನೀಡಿದ ಇಂದಿರಾಜಿ ಅವರ ಹೆಸರಿನಲ್ಲಿ ಕಾರ್ಕಳದಲ್ಲಿ ಸ್ವಂತ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಅತಿ ಶೀಘ್ರದಲ್ಲಿ ನಡೆಯಲಿದ್ದು ಎಲ್ಲರ ಸಹಕಾರದೊಂದಿಗೆ ಭವ್ಯವಾದ ಕಾಂಗ್ರೆಸ್ ಜನಸೇವಾ ಕಚೇರಿ ನಿರ್ಮಾಣವಾಗಲಿದೆ, ಈ ಭವ್ಯ ಕಟ್ಟಡಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರಪಾಲ್ ನಕ್ರೆ ಅವರು ಮಾತನಾಡಿ ಮಹಿಳಾ ಸಬಲೀಕರಣದ ಚಿಂತನೆ ಹುಟ್ಟಿದ್ದೇ ಇಂದಿರಾ ಗಾಂಧಿ ಪ್ರಧಾನಿಯಾದ ನಂತರ. ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಿ ಸರ್ವರಿಗೂ ಸಮಬಾಳು ಸಮಪಾಲು ದ್ಯೇಯದೊಂದಿಗೆ ಬಡವರಿಗೂ ಹಕ್ಕುಗಳನ್ನು ನೀಡಿದರು. ಬಡವನಿಗೆ ಊಟ, ಬಡವನಿಗೆ ಭೂಮಿ, ಬಡವನಿಗೆ ಉದ್ಯೋಗ ನೀಡುವ ಇಂದಿರಾ ಗಾಂಧಿಯವರ ಈ ಜನಪರ ನೀತಿಯ ವಿರುದ್ದ ಕೆಲವೊಂದು ಶಕ್ತಿಗಳು ವಿರೋದ ವ್ಯಕ್ತಪಡಿಸಿದ್ದು ದುರಂತ ಎಂದರು, ಇಂದಿರಾ ಗಾಂಧಿಯವರ ಹತ್ಯೆ ಅದು ಪ್ರಜಾಪ್ರಭುತ್ವದ ಹತ್ಯೆ ಎಂದರು.

ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಭಾನು ಬಾಸ್ಕರ ಪೂಜಾರಿಯವರು ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ಕುಕ್ಕುಂದೂರು ಗ್ರಾಮ ಪಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ, ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಶ್ರೀಮತಿ ವೀಣಾ ವಾಸು ಶೆಟ್ಟಿ, ಭ್ಯೂನ್ಯಾಯ ಮಂಡಳಿ ಸದಸ್ಯ ಸುನೀಲ್ ಭಂಡಾರಿ, ಮುಸ್ಲಿಂ ಜಮಾತ್ ಅದ್ಯಕ್ಷ ಅಶ್ಪಾಕ್ ಅಹಮ್ಮದ್, ಪುರಸಭಾ ಮಾಜಿ ಅದ್ಯಕ್ಷರುಗಳಾದ ಸೀತಾರಾಮ ದೇವಾಡಿಗ, ರೆಹಮತ್, ಸುಭಿತ್.ಎನ್.ಆರ್, ರಾಜ್ಯ ಮಹಿಳಾ ಕಾರ್ಯದರ್ಶಿ ಶ್ರೀಮತಿ ಅನಿತಾ ಡಿಸೋಜ, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಯುವ ಕಾಂಗ್ರೆಸಿನ ಮಂಜುನಾಥ ಜೋಗಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ ಧನ್ಯವಾದವಿತ್ತರು. ಮಹಿಳಾ ಪಧಾದಿಕಾರಿಗಳಾದ ಡಿಂಪಲ್, ಶೋಭಾ, ಕಾಂತಿ ಶೆಟ್ಟಿ ಮತ್ತು ಮಹಿಳಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here