ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ರೂ 65ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ “ಆಯುಷ್ಮಾನ್ ಅರೋಗ್ಯ ಕೇಂದ್ರ” ನಿರ್ಮಾಣ ಕಾಮಗಾರಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸಗೈದರು. ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಸದಸ್ಯರಾದ ರುಕ್ಮಿಣಿ, ದಿನೇಶ್ ಭಟ್, ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ತ್ರಿವೇಣಿ, ಸುರಕ್ಷಾ ಅಧಿಕಾರಿ ದಿಶಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ, ಮತ್ತಿತರರು ಈ ಸಂದಭ೯ದಲ್ಲಿದ್ದರು. ಪಂಚಾಯತ್ ಅಭಿವೃದ್ಧಿ ಆಧಿಕಾರಿ ರೋಹಿಣಿ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.