ಮೂಡುಬಿದಿರೆ : ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸಹಿತ ಅನೇಕಾರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ಪ್ರೇರಣಾ ಸೇವಾ ಟ್ರಸ್ಟ್ ಹಿಂದೂ ಸಂಸ್ಕೃತಿಯ ಸಾರವನ್ನು ಮೈಗೂಡಿಸಿಕೊಂಡು ರಾಷ್ಟ್ರ ಹಿತದ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂಬುದಾಗಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾಗಿರುವ ಡಾ. ವಾಮನ ಶೆಣೈಯವರು ಟ್ರಸ್ಟಿನ ನಿಯೋಜಿತ ನೂತನ ಕಾರ್ಯಾಲಯ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.

ಕಲಿಯುಗದಲ್ಲಿ ದುಷ್ಟಶಕ್ತಿಗಳೇ ಎಲ್ಲೆಡೆ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಸಮಾಜಹಿತಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ಸಜ್ಜನ ಶಕ್ತಿಗಳ ಇಂತಹ ಸೇವಾ ಮನೋಭಾವದಿಂದಾಗಿಯೇ ಸಮಾಜವಿಂದು ಸ್ವಲ್ಪವಾದರೂ ನೆಮ್ಮದಿಯಿಂದಿರಲು ಸಾಧ್ಯವಾಗಿದೆ. ಸೇವೆಯೆಂಬುದು ಹಿಂದೂವಿನ ಸಹಜ ಧರ್ಮವೇ ಆಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕರು ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷರೂ ಆಗಿರುವ  ಉಮಾನಾಥ ಎ. ಕೋಟ್ಯಾನ್‌ರವರು ಮಾತನಾಡುತ್ತಾ ಇಂದು ಮೂಡುಬಿದಿರೆ ಹಿಂದೂ ಸಮಾಜದ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿಯುವ ದಿನವಾಗಿದೆ. ಸನಾತನ ಹಿಂದೂ ಧರ್ಮದ ಉಳಿವಿಗಾಗಿಯೇ ಜನ್ಮ ತಾಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಪ್ರೇರಣಾ ಶಿಶು ಮಂದಿರ ಹಾಗೂ ಶಾಲೆಯ ಪಕ್ಕದಲ್ಲಿಯೇ ಇರುವ 0.25 ಸೆಂಟ್ಸ್ ಜಮೀನಿನಲ್ಲಿ ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಟ್ರಸ್ಟಿನ ನೂತನ ಕಾರ್ಯಾಲಯ ನಿರ್ಮಾಣಗೊಳ್ಳಲಿದ್ದು ಮುಂದಿನ ವಿಜಯದಶಮಿಯ ಹೊತ್ತಿಗೆ ಅದು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು. ಕಟ್ಟಡ ಸಮಿತಿಯ ಕರ‍್ಯಾಧ್ಯಕ್ಷರೂ, ಪ್ರಸಿದ್ಧ ಉದ್ಯಮಿಗಳೂ ಆಗಿರುವ  ಶಶಿಧರ ಶೆಟ್ಟಿ ಬರೋಡಾ ಅವರು ಮಾತನಾಡಿ ಪ್ರೇರಣಾ ಸೇವಾ ಟ್ರಸ್ಟಿನ ಕಾರ್ಯಗಳು ಎಲ್ಲರಿಗೂ ಪ್ರೇರಣೆ ನೀಡುವಂಥಾದ್ದಾಗಿದೆ. ಹಿಂದೂ ಸಮಾಜದ ನಮ್ಮೆಲ್ಲರ ಮನೆಯಾಗಲಿರುವ ಈ ಕಾರ್ಯಾಲಯವು ನಮ್ಮ ತುಳುನಾಡಿನ ಪದ್ಧತಿಯಂತೆ ವಿಜಯದಶಮಿಗೆ ಹೊಸ ಅಕ್ಕಿ ಊಟದೊಂದಿಗೆ ಮನ, ಮನೆ ತುಂಬಿಸುವAತಾಗಲಿ ಎಂದು ಹಾರೈಸಿದರು. ಟ್ರಸ್ಟಿನ ಅಧ್ಯಕ್ಷರಾದ  ವಿವೇಕಾನಂದ ಕಾಮತ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಪ್ರೇರಣಾ ಶಿಶುಮಂದಿರದ ಪುಟಾಣಿಗಳು ದೇವತಾ ಸ್ತೋತ್ರಗಳನ್ನು ಪಠಿಸಿದರು. ಮೂಕಾಂಬಿಕಾ ಭಟ್ ಪ್ರಾರ್ಥಿಸಿದರು. ರೋಹನ್ ಕಲ್ಲಬೆಟ್ಟು ಅವರು ಸಂಘದ ಶತಾಬ್ದಿ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು. ಡಾ. ಕೇಶವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕೋಶಾಧಿಕಾರಿ ಅಜಿತ್ ಕುಮಾರ್ ವಂದಿಸಿದರು.

