ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ

0
128

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನದ ಶಿಲನ್ಯಾಸ ಕಾರ್ಯಕ್ರಮ ಆದಿತ್ಯವಾರ ಆಕರ್ಷಕ ಕೀಲುಕುದುರೆ, ಗೊಂಬೆ ಕುಣಿತ, ಕೇರಳದ ಚೆಂಡೆ ವಾದ್ಯ, ಕುಣಿತ ಭಜನಾ ತಂಡ ಹಾಗೂ ಪೂರ್ಣ ಕುಂಭದೊಂದಿಗೆ ನಿವೇಶನ ಸ್ಥಳದ ತನಕ ಅದ್ದೂರಿಯ ಮೆರವಣಿಗೆ ನಡೆದು ಮಾಣಿಲ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಸಮುದಾಯ ಭವನದ ಶಿಲನ್ಯಾಸ ಮಾಡಿದರು. ನಂತರ ನರಿಕೊಂಬು ಕುಂಬಾರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಎಂ ಪಿ ಸುಂದರ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಪಾಣೆಮಂಗಳೂರು ಸತ್ಯ ಶ್ರೀ ಕಲ್ಯಾಣ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮಾಡಿದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ರಮನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ, ನರಿಕೊಂಬು ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಶ್ರೀ ವೀರನಾರಾಯಣ ದೇವಸ್ಥಾನ ಶಕ್ತಿನಗರ ಅಧ್ಯಕ್ಷ ಸುಂದರ ಕುಲಾಲ್,ಶ್ರೀ ವೀರನಾರಯಣ ದೇವಸ್ಥಾನ ಕುಲಶೇಖರದ ಸೇವ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು, ಮುಂಬೈ ಮಲ್ಲ ದಿನಪತ್ರಿಕೆ ಸಂಪಾದಕ ದಿನೇಶ್ ಕುಲಾಲ್, ಬಂಟ್ವಾಳ ಸಮಾಜ ಸೇವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಜನಾರ್ದನ ಬೊಂಡಲಾ, ಮೂರ್ತ ದಾರರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ಕುಲಾಲ್ ಸಂಘ ಮೂಡಿಗೆರೆ ಅಧ್ಯಕ್ಷ ಹರೀಶ್ ಮೂಡಿಗೆರೆ, ಉದ್ಯಮಿ ಯು ರಾಮ ಉಪ್ಪಿನಂಗಡಿ,

ಈ ಕಾರ್ಯಕ್ರಮದ ನಿಮಿತ್ತ ಗುರುಗಳಾದ ವಿದುಷಿ ನಾಯನ ಸತ್ಯನಾರಾಯಣ ಹಾಗೂ ವಿದುಷಿ ಅಶ್ವಿನಿ ಹೊಳ್ಳ ರವರ ಶಿಷ್ಯರಿಂದ ಭರತನಾಟ್ಯ, ವಿಠಲ ನಾಯಕ್ ರವರಿಂದ ಗೀತಾ -ಸಾಹಿತ್ಯ, ಸಂಭ್ರಮ ಜರಗಿತು.
ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಎಂ ಕೆ ಸ್ವಾಗತಿಸಿ, ಪ್ರಚಾರ ಸಮಿತಿಯ ವಸಂತ್ ಕುಲಾಲ್ ಭೀಮಗತ್ತೆ ಪ್ರಾಸ್ತಾವಿಕ ಮಾಡಿ, ಕೋಶಾಧಿಕಾರಿ ಕರುಣಾಕರ ಕುಲಾಲ್ ನಾಯಿಲ ವಂದಿಸಿದರು. ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here