ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳ  ವಿತರಣೆ

0
115

ಉಡುಪಿ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬುಧವಾರದಂದು ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಇಪ್ಪತೈದು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು  ವಿತರಣೆ ಮಾಡುವ ಕಾರ್ಯಕ್ರಮವನ್ನು ಮಾಡಲಾಯಿತು.

ಸಂಸ್ಕಾರ ನೋಟ್ ಪುಸ್ತಕಗಳ ಮುಖಪುಟ ಹಾಗೂ ಹಿಂಬದಿಯ ಪುಟದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ರಾಷ್ಟ್ರ ಪುರುಷರ, ಒಳ್ಳೆಯ ರಾಜ್ಯಾಡಳಿತ ನಡೆಸಿ ಪ್ರಜೆಗಳ ಹಿತಕ್ಕಾಗಿಯೇ ದುಡಿದ ರಾಜ ಮಹಾರಾಜರ ಆದರ್ಶಗಳು, ಒಳಗಿನ ಪುಟದಲ್ಲಿ ಸುಸಂಸ್ಕಾರ, ನೈತಿಕತೆಯ ಬಗ್ಗೆ ವಿಷಯ ಒಳಗೊಂಡಿರುತ್ತದೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಆಳವಡಿಸಿಕೊಂಡರೆ ಮಕ್ಕಳು ’ಆದರ್ಶ ವಿದ್ಯಾರ್ಥಿ’ ಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ, ಇದರಿಂದ ಮುಂದೆ ಅವರು ’ಆದರ್ಶ ರಾಷ್ಟ್ರ’ ಕಟ್ಟಲು ಸಾಧ್ಯವಾಗುವುದು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರಾದ ಸೌ. ರತ್ನಾ ಮೂಲ್ಯ, ಸೌ. ಗೀತಾ ಆಚಾರ್ಯ ಹಾಗೂ ಸೌ. ಪ್ರಜ್ಞಾ ರಾವ್ ಇವರುಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌ. ಶಾಂತಿಲತಾ,  ಶಾಲಾ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here