ಮೂಡುಬಿದಿರೆ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸೋಮವಾರದಂದು ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಡಲ ಕೆರೆ, ಮೂಡಬಿದ್ರಿ ಇಲ್ಲಿನ ಇನ್ನೂರ ಎಪ್ಪತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಮಾಡಲಾಯಿತು.
ಮಕ್ಕಳಲ್ಲಿ ರಾಷ್ಟ್ರಾಭಿಮಾನ, ನೈತಿಕ ಮೌಲ್ಯಗಳನ್ನು ಸುಸಂಸ್ಕಾರಗಳನ್ನು ವೃದ್ಧಿಸುವ ದೃಷ್ಟಿಯಿಂದ ಮಹಾನ್ ಪುರುಷರ ಹಾಗೂ ದೇಶಕ್ಕಾಗಿ ಹೋರಾಡಿದ ವೀರ ವನಿತೆಯರ ಸಾಹಸ, ಸ್ವಾಭಿಮಾನ, ರಾಷ್ಟ್ರ ಭಕ್ತಿ ಮತ್ತು ಆದರ್ಶ ದಿನಚರಿಗಳನ್ನು ಬಿಂಬಿಸುವ ವಿಷಯಗಳನ್ನು ಒಳಗೊಂಡಿರುವ ಸಂಸ್ಕಾರ ನೋಟು ಪುಸ್ತಕ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರಾದ ಸೌ. ಜಾಹ್ನವಿ ಪೈ ಇವರು ಗುರುಗಳ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿದರು. ಸೌ. ನಂದಿತಾ ಕಾಮತ್ ಇವರು ನೈತಿಕ ಮೌಲ್ಯಗಳ ಬಗ್ಗೆ ಹಾಗೂ ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಶಾಲೆಯ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರಾದ ಶ್ರೀ ಶಾಂತಾರಾಮ ಕುಡ್ವ, ಮುಖ್ಯೋಪಾಧ್ಯಾಯಿನಿ ಸೌ. ವತ್ಸಲಾ ಮಾತಾಜಿ ಹಾಗೂ ಶಾಲಾ ಶಿಕ್ಷಕಿಯರು, ಸಂಸ್ಥೆಯ ಕಾರ್ಯಕರ್ತರಾದ ಸೌ. ಶೋಭಾ ವಿಠ್ಠಲ್ ಉಪಸ್ಥಿತರಿದ್ದರು.