ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

0
23


ಜಪ್ಪಿನಮೊಗರು : ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ೧೭ನೇ ರ‍್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಅಂಗವಾಗಿ ಸಾಮಾಜಿಕ ಸೇವಾ ಕಾರ‍್ಯಕ್ರಮದಡಿಯಲ್ಲಿ ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಮಂಗಳೂರು ಮತ್ತು ಲಯನ್ಸ್‌ ಕ್ಲಬ್‌ ಕುಡ್ಲ ಮಂಗಳೂರು ಇದರ ಸಹಯೋಗದೊಂದಿಗೆ ಒನ್‌ಸೈಡ್‌ ಎಸ್ಕಿಲೊರ್‌ ಲಕೊಟಿಕ ಪೌಂಡೇಷನ್‌ ಬೆಂಗಳೂರು ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಡಾ| ದಯಾನಂದ ಪೈ ಮತ್ತು ಸತೀಶ್‌ ಪೈ ಚಾರಿಟೇಬಲ್‌ ಟ್ರಸ್ಟ್‌ (ರಿ) ಬೆಂಗಳೂರು ಇದರ ಸಹಕಾರದೊಂದಿಗೆ ಉಚಿತ ನೇತ್ರಾ ತಪಾಸಣಾ ಶಿಬಿರವು ಜಪ್ಪಿನಮೊಗರು ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಾಜಿ ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್‌ ವಹಿಸಿದ್ದರು. ಸದಾಶಿವ ದಾಸ್‌ ಉದ್ಯಮಿ ಟ್ರಸ್ಟಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಜಾಲ್‌ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಇದರ ಅಧ್ಯಕ್ಷರಾದ ಅನಂದ್‌ ಶೆಟ್ಟಿ ಅಡ್ಯಾರ್‌, ಲಯನ್ಸ್‌ ಕ್ಲಬ್‌ ನ ಲ|ಸುರ‍್ಶನ್ ಪಡಿಯಾರ್‌, ಲಯನ್ಸ್‌ ಕ್ಲಬ್‌ ಕುಡ್ಲ, ಇದರ ಮಾಜಿ ಅಧ್ಯಕ್ಷರಾದ ಲ| ಹರೀಶ್‌ ಆಳ್ವ, ನಾಗುರಿ ವ್ಯವಸಾಯ ಸಹಕಾರಿ ಸಂಘ (ರಿ) ಇದರ ನರ‍್ದೇಶಕ ಹಾಗೂ ಲಯನ್ಸ್‌ ಕ್ಲಬ್‌ ಕುಡ್ಲದ ಮಾಜಿ ಅಧ್ಯಕ್ಷ ಲ| ಶ್ರೀಧರ್‌ ರಾಜ್‌ ಶೆಟ್ಟಿ ಕಡೇಕಾರ್‌, ಪ್ರಸಾದ್‌ ನೇತ್ರಾಲಯದ ವೈದ್ಯಾಧಿಕಾರಿ ಡಾ| ಶೀತಲ್‌ ಮೊದಲಾದವರು ಭಾಗವಹಿಸಿದ್ದರು.
ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್‌ ಜೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಭಾಷ್‌ ವಿ. ಅಡಪ ವಂದಿಸಿದರು. ಸಂಚಾಲಕರಾದ ಹರೀಶ್‌ ಶೆಟ್ಟಿ ತರ‍್ದೋಲ್ಯರವರು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸುಮಾರು ಮುನ್ನೂರು ಜನ ಭಾಗವಹಿಸಿದ್ದು, ಅಗತ್ಯ ಬಿದ್ದವರಿಗೆ ಶಿಬಿರದಲ್ಲೆ ಉಚಿತ ಕನ್ನಡಕ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ಆಸ್ಪತ್ರೆಯಲ್ಲಿ ವಿನಾಯಿತಿ ಆಧಾರದಲ್ಲಿ ಚಿಕಿತ್ಸೆನೀಡಲಾಗುವುದು ಎಂದು ಅಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದರು.

LEAVE A REPLY

Please enter your comment!
Please enter your name here