ಪರ್ಕಳ: JCI ಪರ್ಕಳ ಹಾಗೂ ಪ್ರಸಾದ್ ನೇತ್ರಾಲಯ ಇವರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ ಆಯ್ಕೆಯಾದ ಫಲಾನುಭವಿಗಳಿಗೆ ದಿನಾಂಕ 16-02-2026 ರಂದು ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 89 ಜನ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ನಾಡೋಜ ಕೃಷ್ಣ ಪ್ರಸಾದ್, ಉದ್ಯಮಿ Jc ಪ್ರಕಾಶ್ ಶೆಣೈ, JCI ಪರ್ಕಳದ ಅಧ್ಯಕ್ಷ JC HGF ಭರತ್ ಕೆ ಕುಲಾಲ್, JCI ಪರ್ಕಳದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ನೀಡಿದರು.
ಸಮಾಜದ ದುರ್ಬಲ ವರ್ಗದ ಜನರಿಗೆ ದೃಷ್ಟಿ ಆರೈಕೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. JCI ಪರ್ಕಳ ಸಂಸ್ಥೆಯು ಮುಂದೆಯೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದಾಗಿ ತಿಳಿಸಿದೆ.

