ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್, ಶಾರದ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ವೈದ್ಯಕೀಯ ಮಹ ವಿದ್ಯಾಲಯ ಹಾಗೂ ಆಸ್ಪತ್ರೆ ಸಹಯೋಗದಿಂದ ಉಚಿತ ಆರೋಗ್ಯ ಶಿಬಿರವು ದ.ಕ.ಜಿ.ಪ ಉನ್ನತಿಕರಿಸಿದ ಪ್ರೌಢಶಾಲೆ ಕೆ ಎಸ್ ರಾವ್ ನಗರ ಇಲ್ಲಿ ಜರಗಿತು.ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸ್ಥಾಪಕ ಅಧ್ಯಕ್ಷರಾದ ಪ್ರಸ್ತಾವಿಕ ನುಡಿಯೊಂದಿಗೆ ವೆಂಕಟೇಶ ಹೆಬ್ಬಾರ್ ಸ್ವಾಗತಿಸಿದರು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪರ ಅಧ್ಯಕ್ಷರಾದ ಅನಿಲ್ ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶ ವಿಶೇಷವಾಗಿ ಕೂಲಿಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಮಧುಮೇಹದಂತ ಹಾ ರೋಗಗಳು ಪ್ರಾರಂಭದಲ್ಲಿ ತಿಳಿದುಕೊಂಡಲ್ಲಿ ಖಂಡಿತ ಗುಣಪಡಿಸಲು ಸಾಧ್ಯ ಅದರ ಬಗ್ಗೆ ಮಾಹಿತಿ ಹಾಗೂ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಲು ಈ ದಿನ ಶಾರದಾ ಯೋಗ ಮತ್ತು ನೇಚುರೋಪತಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಬಂದು ಮಾಹಿತಿ ನೀಡುವರು ಪರಿಸರದ ಜನರು ಇದರ ಉಪಯೋಗ ಪಡೆದುಕೊಳ್ಳ ಬೇಕಾಗಿ ವಿನಂತಿಸಿದರು.
ತರುವಾಯ ಶಾರದ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ವೈದ್ಯಕೀಯ ಮಹ ವಿದ್ಯಾಲಯ ಹಾಗೂ ಆಸ್ಪತ್ರೆ ತಲಪಾಡಿ ಇಲ್ಲಿಯ ವೈದ್ಯಾಧಿಕಾರಿ ಗಳಾದ ಡಾಕ್ಟರ್ ಹರ್ಷಿತಾ ರಾವ್ ಜನರಿಗೆ ಆಹಾರ ಪದ್ಧತಿ ಹಾಗೂ ಯೋಗ ಗಳಿದ್ದ ಮಧುಮೇಹ ಹಾಗೂ ಅನೇಕ ರೋಗಗಳನ್ನು ನಿಯಂತ್ರಿಸಬಹುದು ಹಾಗೂ ಸಂಪೂರ್ಣ ತಡೆಗಟ್ಟಬಹುದು ಎಂದರು ವೇದಿಕೆಯಲ್ಲಿ ಡಾಕ್ಟರ್ ತಬ್ಸಿರ, ಪ್ರೌಢಶಾಲಾ ಪ್ರಾಂಶುಪಾಲರಾದ ಶ್ರೀಮತಿ ಕಾಮೇಶ್ವರಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿದ್ದಪ್ಪ,ಲಯನ್ ರಾಜೇಶ್ ಆಸೀನರಾಗಿದ್ದರು ಪ್ರತಿಭಾ ಹೆಬ್ಬಾರ್, ಕಲ್ಲಪ್ಪ ತಡವಲಗ ಬಶೀರ್ ಕುಲಾಯಿ, ಗೊಲ್ಲಾಳಪ್ಪ ತಮಗೊಂಡ ಮಾಜಿ ಸಾಯಿ ಸಮಿತಿ ಅಧ್ಯಕ್ಷರು ನಗರ ಪಂಚಾಯತ್ ಮೂಲ್ಕಿ ರಾಜುಮದರಿ. ಬಂಡಯ್ಯಸ್ವಾಮಿ ದೇಶಣಗಿ ಗುರುಪಾದಯ್ಯ ಸ್ವಾಮಿ.ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಕಾಮೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು.

