ಮೂಡುಬಿದಿರೆ: ಉಚಿತ ಆರೋಗ್ಯ ಶಿಬಿರಗಳು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ನಿಟ್ಟಿನಲ್ಲಿ ಅನೇಕ ಶಿಬಿರಗಳನ್ನು ಏರ್ಪಡಿಸುತ್ತಿರುವ ವಿಜೋಯ್ ಅಶ್ವಿನ್ ಕಾರ್ಡೋಜ ಅವರ ಕಾರ್ಯ ಶ್ಲಾಘನೀಯ ಎಂದು ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಮುಖ್ಯಶಿಕ್ಷಕ ದಿನಕರ್ ಹೇಳಿದರು.
ವಿಜೋಯ್ ಅಶ್ವಿನ್ ಕಾರ್ಡೋಜ ನೇತೃತ್ವದಲ್ಲಿ, ಪಾಲಡ್ಕ ಗ್ರಾಮ ಪಂಚಾಯತ್ ಹಾಗೂ ಎ.ಜೆ. ಆಸ್ಪತ್ರೆ,ಮಂಗಳೂರು ಸಹಯೋಗದೊಂದಿಗೆ, ಐ.ಸಿ.ವೈ.ಎಮ್. ಹಾಗೂ ಕ್ಯಾಥೋಲಿಕ್ ಸಭಾ ಪಾಲಡ್ಕ ಘಟಕ, ಪಿ.ಎಫ್.ಸಿ. ಫ್ರೆಂಡ್ಸ್ ಕ್ಲಬ್, ಪೂಪಾಡಿಕಲ್ಲು ಇವರ ಸಹಕಾರದೊಂದಿಗೆ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ ದಂತ ಚಿಕಿತ್ಸೆ, ಕಣ್ಣು ತಪಾಸಣೆ, ಹಾಗೂ ಇತರೆ ರೋಗಗಳ ತಜ್ಞರು ಭಾಗವಹಿಸಿದ್ದರು.

ಸುಮಾರು 120 ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಮತ್ತು ಮಾಹಿತಿ ಪಡೆದರು. ಪಿ.ಎಫ್.ಸಿ. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಡೇನಿಯಲ್, ಫುಡಾರ್ ಗ್ರೂಪ್ ಕಂಪೆನಿ ಸಿಇಒ ವಿಜೋಯ್ ಅಶ್ವಿನ್ ಕಾರ್ಡೋಜ, ಕ್ಯಾಥೋಲಿಕ್ ಸಭಾ ಪಾಲಡ್ಕ ಅಧ್ಯಕ್ಷ ಪ್ರಜ್ವಲ್, ಐ.ಸಿ.ವೈ.ಎಮ್. ಪಾಲಡ್ಕ ಅಧ್ಯಕ್ಷ ನಿಖಿಲ್, ಗ್ರಾ.ಪಂ. ಸದಸ್ಯರು ಹಾಗೂ ಕಡಂದಲೆ ಶಾಲಾ ಸಿಬ್ಬಂದಿ ಸಹಿತ ಗಣ್ಯರು ಉಪಸ್ಥಿತರಿದ್ದರು.