ಉಚಿತ ಶ್ರವಣ ತಪಾಸಣಾ ಶಿಬಿರ

0
32

ವರದಿ ರಾಯಿ ರಾಜ ಕುಮಾರ

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರು, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ 7 ಮತ್ತು 8ರಂದು ಉಚಿತ ಶ್ರವಣ ತಪಾಸಣಾ ಶಿಬಿರ ಮಂಗಳೂರಿನ ಪತ್ರಿಕಾ ಭವನದಲ್ಲಿ ಆಯೋಜಿಸಿರುತ್ತಾರೆ. ಉಚಿತ ತಪಾಸಣೆಯೊಂದಿಗೆ ಶ್ರವಣ ಯಂತ್ರಕ್ಕೆ ಸಹಾಯಧನವನ್ನು ಒದಗಿಸಲಾಗುವುದು ಎಂದು ತಿಳಿಸಿರುತ್ತಾರೆ.

ಸಂಘದ ಸಹಯೋಗದೊಂದಿಗೆ ಮಂಗಳೂರು ಪ್ರೆಸ್ ಕ್ಲಬ್ ,ಪತ್ರಿಕಾ ಭವನ ಟ್ರಸ್ಟ್ ಸಹಕಾರ ದೊಂದಿಗೆ ಕಳೆದ ಸಲದಂತೆ ಈ ಬಾರಿಯೂ ದಿನಾಂಕ 7-02-2026 ಮತ್ತು 8-02-2026 ರಂದು ಉಚಿತ ಶ್ರವಣ ತಪಾಸಣಾ ಶಿಬಿರ (ಸಮಯ ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ) ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಸಲಿದೆ.ಈ ಶಿಬಿರದಲ್ಲಿ ಉಚಿತವಾಗಿ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ನಡೆಯಲಿದೆ ಎಂದು ತಂಡದ ಸಂಚಾಲಕ ಲವ ಬಂಗೇರಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಶಿಬಿರದಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರ ಜೊತೆ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜ ನಿಕರು ಉಚಿತ ತಪಾಸಣೆ ಮಾಡಿಕೊಳ್ಳಬಹುದಾಗಿದೆ.ಈ ಬಗ್ಗೆ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿ ವಿನಂತಿ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ) ವತಿಯಿಂದ ಕಳೆದ ಬಾರಿ ಆಯೋಜಿಸಿರುವ ಶಿಬಿರದಲ್ಲಿ 68 ಮಂದಿ ತಪಾಸಣೆಗೆ ಒಳಗಾಗಿದ್ದರು.

ಈ ಶಿಬಿರದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕೆಲವು ಸೂಚನೆಗಳು ಹೀಗಿವೆ :-

*ನೋಂದಣಿ ಕಡ್ಡಾಯವಾಗಿದೆ ಕರೆಮಾಡಿ ನೋಂದಾಯಿಸಿಕೊಳ್ಳಿ.
*ಹಿರಿಯರ ನಾಗರಿಕರಿಗೆ ಮೊದಲ ಆದ್ಯತೆ. (ಮನೆಯವರೊಂದಿಗೆ ಬರಬೇಕು)
*ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ (Old Report) ಇದ್ದರೆ ಜೊತೆಯಲ್ಲಿ ತನ್ನಿ
*ಈಶ್ವರ್ ಮಲ್ಪೆ ಟೀಮ್‌ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸುತ್ತಾರೆ.(ಮೊದಲು ನೋಂದಾಯಿಸುವ 30 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.)

ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆಯಾದ ಟೀಮ್ ಈಶ್ವ‌ರ್ ಮಲ್ಪೆಯವರು (Hearing Machine) ಆಗುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here