ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವಿಭಾಗ ಮಾರುಕಟ್ಟೆ ಸಮೀಪದ ಸಹಚರದಲ್ಲಿ ಇಂದು ನಡೆದ ಉಚಿತ ಸೊರಿಯಾಸಿಸ್ ತಪಾಸಣಾ ಶಿಬಿರದಲ್ಲಿ 45 ಮಂದಿ ಭಾಗವಹಿಸಿದ್ದರು. ಅವರೆಲ್ಲರಿಗೂ ಸೂಕ್ತ ಔಷಧೀಯ ಪರಿಹಾರವನ್ನು ಡಾ ಸುಬ್ರಹ್ಮಣ್ಯ ಪದ್ಯಾಣ,ಡಾ ರಜತ್ ಕುಮಾರ್ ಹಾಗೂ ಡಾ ವಿಕ್ರಮ್, ಸೂಚಿಸಿ ಮುಂದಿನ ಚಿಕಿತ್ಸೆಗಳಿಗೆ ಮಾರ್ಗದರ್ಶನ ನೀಡಿದರು.