ಫೆಬ್ರವರಿ :20 ಶುಕ್ರವಾರ : ನಾಗಮಂಡಲದಲ್ಲಿ ಕೃಷಿ ಮಂಡಲ

0
14

ಹೆಬ್ರಿ : ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುವ ನಾಗಮಂಡಲದಲ್ಲಿ ಕರಷಿಯ ವಿಚಾರಗೋಷ್ಠಿ “ಕೃಷಿ ಮಂಡಲ” ನಡೆಯಲಿದೆ.

ಕೃಷಿ ಮಂಡಲದ ಕೃಷಿ ವಿಚಾರಗೋಷ್ಠಿಯನ್ನು ಬೆಳಗ್ಗೆ 10:30ಕ್ಕೆ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸುವರು. ಪ್ರಸ್ತಾವನೆಯನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನಡೆಯುವ ಮೊದಲ ಕೃಷಿ ವಿಚಾರಗೋಷ್ಠಿಯಲ್ಲಿ ಕರಾವಳಿ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳು ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಕೃಷಿ ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ವಿಚಾರ ಮಂಡಿಸುವರು.

2ನೇ ಗೋಷ್ಠಿ : ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಪ್ರಗತಿಪರ ಕೃಷಿಕ ಗುಣ ಪಾಲ ಕಡಂಬ ವಹಿಸಲಿದ್ದಾರೆ.

ಮಧ್ಯಾಹ್ನ 2:30ಕ್ಕೆ ನಡೆಯಲಿರುವ ಕೃಷಿಗೋಷ್ಠಿಯಲ್ಲಿ ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸತಿಯ ಅನುಭವ ವಿಷಯದ ಮೇಲೆ ಕುರುಡಪದವು ಮೈರುಗದ ಪ್ರಯೋಗಶೀಲ ಕೃಷಿಕ ಪ್ರವೀಣ್ ಕೇಶವ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ವಹಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಬಡಗುತ್ತಿಟ್ಟಿನ ಖ್ಯಾತ ಭಾಗವಾತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ತೆಂಕುತಿಟ್ಟಿನ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷಗಾನವಲ್ಲರಿ ನಡೆಯಲಿದೆ.

LEAVE A REPLY

Please enter your comment!
Please enter your name here