ಜಿ ರಾಮ್ ಜಿ ಕಾಯ್ದೆ ನರೇಗಾ ಮೂಲ ಸ್ವರೂಪಕ್ಕೆ ಧಕ್ಕೆ : ಮಾಜಿ ಸಚಿವ ಸೊರಕೆ

0
24

ಉಡುಪಿ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸಿ, ವಿಬಿ ಜಿ ರಾಮ್ ಜಿ ಕಾಯ್ದೆ ಮೂಲಕ ಯೋಜನೆಯ ಮೂಲ ಆಶಯವನ್ನೇ ಹತ್ತಿಕ್ಕಲು ಹೊರಟಿರುವುದು ಖಂಡನಿಯ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಣಿಪಾಲ ರಾಜಕಾರಿ ಕಚೇರಿ ಮುಂಬಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಶ್ರಮಿಕ ವರ್ಗದ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ನರೇಗಾ ಯೋಜನೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.

ಗ್ರಾಮೀಣ ಬದುಕಿಗೆ ಕೊಡಲಿ ಪೆಟ್ಟು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೆಲಸದ ಹಕ್ಕನ್ನು ನೀಡುವ ಉದ್ದೇಶದಿಂದ ಜಾರಿಗೆ ತಂದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರವು ಹಂತ ಹಂತವಾಗಿ ದುರ್ಬಲಗೊಳಿಸುತ್ತಿದೆ. ಯೋಜನೆಯ ಹೆಸರನ್ನು ‘ಎಬಿ-ಗ್ರಾಮ್-ಜಿ’ ಎಂದು ಬದಲಾಯಿಸಿರುವುದು ಕೇವಲ ಹೆಸರಿನ ಬದಲಾವಣೆಯಲ್ಲ, ಇದು ಯೋಜನೆಯ ಮೂಲ ಸ್ವರೂಪವನ್ನೇ ನಾಶಮಾಡುವ ಹುನ್ನಾರ ಎಂದು ಆರೋಪಿಸಿದರು.

ಕಾಂಗ್ರೆಸ್ ನಿರ್ಣಯ ಪ್ರತಿಭಟನಿಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಯೋಜನೆಯ ಹೆಸರನ್ನು ಮರಳಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಎಂದೇ ಉಳಿಸಿಕೊಳ್ಳಬೇಕು. ಉದ್ಯೋಗದ ಆಯ್ಕೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸಭೆಗಳಿಗಿದ್ದ ಸ್ವಾಯತ್ತತೆಯನ್ನು ಮರುಸ್ಥಾಪಿಸಬೇಕು. ಗ್ರಾಮೀಣ ಜನರಿಗೆ ವರ್ಷದ ಎಲ್ಲಾ ತಿಂಗಳುಗಳಲ್ಲಿ ಕೆಲಸ ಪಡೆಯುವ ಸಾಂವಿಧಾನಿಕ ಹಕ್ಕನ್ನು ಖಚಿತಪಡಿಸಬೇಕು ಮುಂತಾದ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

ಮುಖಂಡರಾದ ಎಂ.ಎ .ಗಪೂರ್ˌ ಕಿಶನ್ ಹೆಗ್ಡೆ ಕೊಲ್ಕೆಬೈಲುˌ ಜ್ಯೋತಿ ಹೆಬ್ಬಾರ್ˌ ವೆರೋನಿಕಾ ಕರ್ನೆಲಿಯೋ ˌದಿನೇಶ್ ಪುತ್ರನ್, ಬಿ . ನರಸಿಂಹಮೂರ್ತಿˌ ಪ್ರಸಾದ್ ರಾಜ್ ಕಾಂಚನ್ˌದಿನೇಶ್ ಹೆಗ್ಡೆ ಮಳವಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲ್ˌ ನಿರೇ ಕೃಷ್ಣ ಶೆಟ್ಟಿˌರಮೇಶ್ ಕಾಂಚನ್ˌ ರಾಘವೇಂದ್ರ ಶೆಟ್ಟಿ ˌ ವೈ. ಸುಕುಮಾರ್ˌ ಸಂತೋಷ್ ಕುಲಾಲ್ ˌ ಹರೀಶ್ ಕಿಣಿˌ ಭಾಸ್ಕರ ರಾವ್ ಕಿದಿಯೂರ್ˌ ಶಬ್ಬಿರ್ ಆಹ್ಮದ್ ˌ ಪ್ರಖ್ಯಾತ್ ಶೆಟ್ಟಿ ˌಕೀರ್ತಿ ಶೆಟ್ಟಿ ˌ ಹರಿಪ್ರಸಾದ್ ರೈ ˌ ಜಯಕುಮಾರ್ˌ ಕಿಶೋರ್ ಕುಮಾರ್ ಎರ್ಮಾಳ್ ˌ ಮಹಾಬಲ ಕುಂದರ್ ˌ ಅಶೋಕ್ ಹೆಗ್ಡೆ ˌ ಉದ್ಯಾವರ ನಾಗೇಶ್ ಕುಮಾರ್ˌ ಸುರೇಶ್ ಶೆಟ್ಟಿ ಬನ್ನಂಜೆ ˌ ಸತೀಶ್ ಕೊಡವೂರು ˌ ರೋಶನ್ ಶೆಟ್ಟಿ ˌ ಇಸ್ಮಾಯಿಲ್ ಅತ್ರಾಡಿ ˌ ಎಲ್ಲೂರು ಶಶಿಧರ ಶೆಟ್ಟಿ ಎಲ್ಲೂರು ˌ ಕೇಶವ ಕೋಟ್ಯಾನ್ ˌ ಗಣೇಶ್ ನೆರ್ಗಿ ˌ ಗಣೇಶ್ ರಾಜ್ ಸರಳಬೆಟ್ಟು ˌ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here