ಮಾನವೀಯತೆ ಮೆರೆದ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ

0
72


ಹೆಮ್ಮಾಡಿ:ಇತ್ತೀಚಿಗೆ ಗಂಗೊಳ್ಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೃತರಾದ ದಿ.ಸುರೇಶ್ ಖಾರ್ವಿಯವರ ಮಗಳಾದ ಕುಮಾರಿ ಶ್ರೀಯಾ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ‌.ಯು.ಸಿ.ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಈ ವಿದ್ಯಾರ್ಥಿನಿಯ ತಂದೆ ಮೃತರಾದ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಎರಡು ವರ್ಷದ ಸಂಪೂರ್ಣ ಕಾಲೇಜಿನ‌ ಶುಲ್ಕವನ್ನು( ಕಾಲೇಜು ಶುಲ್ಕ,ಸಮವಸ್ತ್ರ, ಮಧ್ಯಾಹ್ನ ಊಟ, ವಾಹನ ಶುಲ್ಕ)ಭರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು ಅಂತೆಯೇ ಈ ದಿನ ವಿದ್ಯಾರ್ಥಿನಿಗೆ ಕಾಲೇಜಿನ‌ ಆಡಳಿತ ಮಂಡಳಿಯ ಕಛೇರಿಯಲ್ಲಿ ‌ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ಚೆಕ್ ಹಸ್ತಾಂತರಿಸುವ ಮೂಲಕ ನುಡಿದಂತೆ ನಡೆದು,ಎರಡು ವರ್ಷಗಳ ಪದವಿಪೂರ್ವ ಶಿಕ್ಷಣದ ಸಂಪೂರ್ಣ ಜವಬ್ದಾರಿಯನ್ನು ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರು,ಬೋಧಕ,ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here