ಗಂಗಾವತಿ ನಗರದ ರೋಟರಿ ಕ್ಲಬ್ ಸೆಂಟ್ರಲ್ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಸಾಮಾಜಿಕ ಶೈಕ್ಷಣಿಕ ಆರ್ಥಿಕ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯ ಕೈಗೊಳ್ಳುತಿದ್ದು ಇಂದು ತಮ್ಮ ಕಚೇರಿಯಲ್ಲಿ ನಗರದ ವರದಿಗಾರ,ಕಲಾವಿದ, ಐತಿಹಾಸಿಕ ಮಾರ್ಗದರ್ಶಕರಾದ ಚನ್ನಬಸವ ಕೊಟಿಗಿ ಇವರಿಗೆ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದ್ದು ಇವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿ, ಪ್ರಶಸ್ತಿ ಪತ್ರ ನೀಡಿ ರೋಟರಿ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಚನ್ನಬಸವ ಕೊಟಿಗಿಯವರು ನಾನು ಬಾಲ್ಯದಿಂದಲೂ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ಯು ಕಾರ್ಯಕ್ರಮಗಳನ್ನು ನೋಡುತ್ತಾ ಇದ್ದು ಓಂ ಸಂಸ್ಥೆಯ ಸಮಾಜ, ಆರೋಗ್ಯ, ಶಿಕ್ಷಣ ವಿಶೇಷವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನನ್ನ ಮನಸ್ಸಿನಲ್ಲಿ ಪ್ರಭಾವ ಬೀರಿದೆ.
ಇಂತಹ ವಿಶ್ವ ವ್ಯಾಪ್ತಿಯ ಸಮಾಜ ಸೇವಾ ಸಂಸ್ಥೆ ನನಗೆ ಸನ್ಮಾನಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಕೃತಜ್ಞತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜಗದೀಶ್ ಅಂಗಡಿ, ಕಾರ್ಯದರ್ಶಿ ಬಸವರಾಜ್ ಕುಂಬಾರ್, ಡಿಸ್ಟ್ರಿಕ್ಟ್ ಪದಾಧಿಕಾರಿ ಟಿ. ಆಂಜನೇಯ, ಮಾಜಿ ಅಧ್ಯಕ್ಷರಾದ ಜೆ.ನಾಗರಾಜ,ಪ್ರಕಾಶ್ ಚಂದ ಛೋಪ್ರಾ, ಎಂ. ಶಿವಕುಮಾರ್, ಸುರೇಶ್ ಬಾಬು, ದಿಲೀಪ್ ಮೋತಾ, ನೂತನ ಸದಸ್ಯರು ಡಾ. ಶ್ರೀಕಾಂತ್ ಬಾರಿಕರ್, ರಾಜೇಶ್ ಚಿನಿವಾರ, ಭಾನುಪ್ರಕಾಶ್ ಕುಂಬಾರ್, ಪ್ರಶಾಂತ ಪರಗಿ ಇನ್ನಿತರರು ಉಪಸ್ಥಿತರಿದ್ದರು.