ಗೀತಾ ವೈಭವ ಹರಿಕಥೆ ಪ್ರಸ್ತುತಿ

0
8

ಉಡುಪಿ : ಹಿರಿಯ‌ ಪತ್ರಕರ್ತ ಕಿರಣ್ ಮಂಜನಬೈಲು ಉಡುಪಿ ಶ್ರೀಕೃಷ್ಣ ಮಠ ಮಧ್ವ ಮಂಟಪದಲ್ಲಿ ಇತ್ತೀಚೆಗೆ ‘ಗೀತಾ ವೈಭವ’ ಹರಿಕಥೆ ಪ್ರಸ್ತುತಪಡಿಸಿದರು. ಯುದ್ಧಭೂಮಿಯಲ್ಲಿ ಕರ್ತವ್ಯ ವಿಮುಖನಾದ ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ಮೂಡಿಸಿದ ಕೃಷ್ಣಬೋಧೆಯ ಜೀವನಪಥ ಭಗವದ್ಗೀತೆ.

ವಿಶ್ವ ಗೀತಾ ಪರ್ಯಾಯದ ಮೂಲಕ ಭಗವದ್ಗೀತೆಯನ್ನು ಜನಮಾನಸಕ್ಕೆ ಕೋಟಿಗೀತಾ ಲೇಖನ ಯಜ್ಞ ಸಹಿತ ವಿವಿಧ ಆಯಾಮಗಳ ಮೂಲಕ ತಲುಪಿಸಿದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಮಕ್ಷಮದಲ್ಲಿ ಪ್ರಸ್ತುತಪಡಿಸಲಾಯಿತು. ಹರಿಕಥೆ ಆಲಿಸಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶುಭ ಹಾರೈಸಿ ಗೌರವಿಸಿದರು. ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.

ಹಿಮ್ಮೇಳದಲ್ಲಿ ಹಾರ್ಮೋನಿಯಮ್ ನಲ್ಲಿ ನಿತ್ಯಾನಂದ ನಾಯಕ್ ಹಾಗೂ ತಬ್ಲಾದಲ್ಲಿ ನಾಗರಾಜ ಖಾರ್ವಿ ಬ್ರಹ್ಮಾವರ ಸಹಕರಿಸಿದರು.

LEAVE A REPLY

Please enter your comment!
Please enter your name here