ಜೇಸಿಐ ಮೂಲ್ಕಿ ಶಾಂಭವಿಯ ವತಿಯಿಂದ ತಾ. 27-05-2025ನೇ ಮಂಗಳವಾರ ರಾತ್ರಿ ಗಂಟೆ 8-00ಕ್ಕೆ ಕಾರ್ನಾಡು ರೋಟರಿ ಶತಾಬ್ದ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೂಲ್ಕಿ ಹೋಬಳಿಯ SSLC ಮತ್ತು PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ 14 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ್, ಸತೀಶ್ ಕಿಲ್ಪಾಡಿ, ಕೇಶವ್ ಸುವರ್ಣ, ಕಾರ್ಯಕ್ರಮ ನಿರ್ದೇಶಕರುಗಳಾದ, ಸುರೇಶ್ ರಾವ್, ಮೊಹಮ್ಮದ್ ಹಬೀಬುಲ್ಲಾ, ಅಶೋಕ್ ಕುಮಾರ್ ಶೆಟ್ಟಿ, ವಾಸು ಪೂಜಾರಿ ಚಿತ್ರಾಪು, ಅನಿಲ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ದಿನೇಶ್ ಕೆ. ಶೆಟ್ಟಿ, ಹರ್ಷರಾಜ್ ಶೆಟ್ಟಿ ಜಿ.ಎಂ., ಪ್ರಕಾಶ್ ಸುವರ್ಣ, ಸುನಿಲ್ ಕುಮಾರ್ ಹಾಗೂ ಸದಸ್ಯರುಗಳು ಹಾಜರಿದ್ದರು. ವಿದ್ಯಾರ್ಥಿಗಳ ಪೈಕಿ ಪ್ರಿಯಾಂವೃತ್ ಭಟ್, ಶ್ಯಾಮಲ ಕಾಮತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರೊಂದಿಗೆ ಜೇಸಿ ಸಂಸ್ಥೆಯ ಬಗ್ಗೆ ಅಭಿವಂದನೆ ಸಲ್ಲಿಸಿದರು. ದಿನೇಶ್ ಕೆ. ಶೆಟ್ಟಿಯವರು ವೇದಿಕೆಗೆ ಆಹ್ವಾನಿಸಿ ವಿದ್ಯಾರ್ಥಿಗಳ ವಿವರವನ್ನು ಸಲ್ಲಿಸಿದರು, ಕಾರ್ಯದರ್ಶಿ ಕೇಶವ ಸುವರ್ಣ ಧನ್ಯವಾದ ಸಮರ್ಪಿಸಿದರು.

