ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮಾಜಕ್ಕೆ ನೀಡಿ; ವಿಶ್ವಾಸ್ ವಿ. ಅಮೀನ್ ಒತ್ತಾಯ

0
50

ಪಡುಬಿದ್ರಿ: ಕರಾವಳಿ ಭಾಗದ ಉದ್ದಗಲಕ್ಕೂ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮೊಗವೀರ ಸಮಾಜವು ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಬ್ಬರದ ಕಡಲಿಗೆ ಎದೆ ಒಡ್ಡಿ ಜೀವ ಭಯ ಲೆಕ್ಕಿಸದೇ ಮೀನುಗಾರಿಕೆಯನ್ನು ಮಾಡಿಕೂಂಡು ಬರುತ್ತಿರುವ ಮೊಗವೀರ ಸಮಾಜವು ಸರ್ಕಾರದ ಸ್ಥಾನ ಮಾನವನನ್ನು ಪಡೆಯುವಲ್ಲಿ ವಂಚಿತರಾಗಿದ್ದೇವೆ. ಅದ್ದರಿಂದ ಈ ಬಾರಿ ಕಾಂಗ್ರೆಸ್ ಸರ್ಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮಾಜದ ಸೂಕ್ತ ವ್ಯಕ್ತಿಗೆ ನೀಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬಾಲ್ಕರ್ ರವರಿಗೆ ಮನವಿ ಸಲ್ಲಿಸಿದ್ದಾರೆ.
ಹಿಂದೆ ಮೊಗವೀರ ‌ಸಮಾಜವು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದು, ಈ ಸಮಾಜದ ಎಸ್ ಕೆ ಅಮೀನ್, ಮನೋರಮಾ ಮಧ್ವರಾಜ್, ಯು.ಅರ್ ಸಭಾಪತಿ , ಪ್ರಮೋದ್ ಮಧ್ವರಾಜ್ ಮತ್ತು ಅನಂದ್ ಅಸ್ಪ್ಮೊಟಿಕರ್ ಹೀಗೆ ಹಲವಾರು ಸಮಾಜದ ನಾಯಕರನ್ನು ಗೆಲ್ಲಿಸುವಲ್ಲಿ ಮಹತ್ವರ ಪಾತ್ರ ವಹಿಸಿರುತ್ತಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜದ ಸೂಕ್ತ ವ್ಯಕ್ತಿಗೆ ನೀಡಿದಲ್ಲಿ ಇತ್ತೀಚೆಗೆ ಕಾಂಗ್ರೇಸ್ ಪಕ್ಷದಿಂದ ಸ್ವಲ್ಪ ದೂರ ಸರಿದಿರುವ ಮೊಗವೀರ ಸಮಾಜವನ್ನು ಕಾಂಗ್ರೇಸ್ ಪಕ್ಷದೆಡೆಗೆ ಮರು ಸೆಳೆಯುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದ್ದು, ಬೇರೆ ಯಾವುದೇ ನಿಗಮವು ಮೊಗವೀರರಿಗೆ ಸಂಬಂಧ ಪಟ್ಟದಲ್ಲ ಹಾಗೂ ಕೆ ಎಫ್ ಡಿ ಸಿ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಬೇರೆ ಸಮಾಜದ ವ್ಯಕ್ತಿಗೆ ನೀಡಿದ್ದು ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಾವಶ್ಯಕ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಒತ್ತಾಯಿಸಿರುತ್ತಾರೆ.

LEAVE A REPLY

Please enter your comment!
Please enter your name here