ಪುತ್ತೂರಿನ ಜಿಎಲ್ ಆಚಾರ್ಯ ಸಂಸ್ಥೆ ಮೂಡುಬಿದಿರೆಯಲ್ಲಿ ಉದ್ಘಾಟನೆ

0
1


ಸುಮಾರು ಏಳು ದಶಕಗಳಿಂದ ಪುತ್ತೂರಿನಲ್ಲಿ ಮನೆ ಮಾತಾಗಿರುವ ಜಿಎಲ್ ಆಚಾರ್ಯ ಸಂಸ್ಥೆ 2024ರಲ್ಲಿ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡು ಇದೀಗ ಬಸ್ಸು ನಿಲ್ದಾಣದ ಎದುರಿನ ನವಮಿ ಪ್ಲಾಜಾ ದಲ್ಲಿ ನೂತನ ವಿಶಾಲ ಐದನೆಯ ಮಳಿಗೆಯನ್ನು ಏಪ್ರಿಲ್ 12ರಂದು ಉದ್ಘಾಟನೆ ಮಾಡಿತು. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸದ ಆಭರಣಗಳನ್ನು ಪೂರೈಸಿದ ಸಂಸ್ಥೆಯ ಚೇರ್ಮನ್ ಜಿಎಲ್ ಬಲರಾಮ ಆಚಾರ್ಯ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಮೋಹನ್ ಆಳ್ವಾ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಧನಲಕ್ಷ್ಮಿ ಸಂಸ್ಥೆಯ ಶ್ರೀಪತಿ ಭಟ್ ದೀಪ ಬೆಳಗಿ ಜಿಎಲ್ ಆಚಾರ್ಯರೊಂದಿಗಿನ ನಾಲ್ಕು ದಶಕಗಳ ಒಡನಾಟವನ್ನು ಸ್ಮರಿಸಿಕೊಂಡು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ನವಮಿ ಸಂಸ್ಥೆಯ ನಂದಕುಮಾರ ಕುಡ್ವ, ಜಿಎಲ್ ಆಚಾರ್ಯ ಸಂಸ್ಥೆಯ ಲಕ್ಷ್ಮಿಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ರಾಜಿವಿ ಆಚಾರ್ಯ ಹಾಗೂ ಕುಟುಂಬಸ್ಥರು ಹಾಜರಿದ್ದರು. ದೀಕ್ಷಾ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here