ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ

0
6

ಬೆಂಗಳೂರು: ಇರಾನ್ ಯುದ್ಧದ ಪರಿಣಾಮವೆಂಬಂತೆ ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿದೆ. ಬೆಳ್ಳಿ ಬೆಲೆಯೂ ತಗ್ಗುತ್ತಿದೆ. ಚಿನ್ನದ ಬೆಲೆ ಕಳೆದ ಈ ತಿಂಗಳು ಒಂದು ಗ್ರಾಮ್​​ಗೆ 1,230 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 15,865 ರೂನಿಂದ 14,635 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 16,000 ರೂ ಗಡಿಯೊಳಗೆ ಬಂದಿದೆ. ಮಾರ್ಚ್ ಆರಂಭದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 315 ರೂ ಇತ್ತು. ಎರಡು ವಾರದಲ್ಲಿ ಬೆಲೆ ಗ್ರಾಮ್​​ಗೆ ಬರೋಬ್ಬರಿ 40 ರೂ ತಗ್ಗಿದೆ. ವಾರಾಂತ್ಯದಲ್ಲಿ 5-10 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

LEAVE A REPLY

Please enter your comment!
Please enter your name here