ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯದ ಸುವರ್ಣ ಗರುಡ ಸಮರ್ಪಣಾ ಯಾತ್ರೆ ಮೂಡುಬಿದಿರೆಯಲ್ಲಿ

0
159


ವರದಿ ರಾಯಿ ರಾಜ ಕುಮಾರ
ಐತಿಹಾಸಿಕ ಖ್ಯಾತಿಯ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯಕ್ಕೆ 18 ಪೇಟೆಯ ದೇವಾಲಯಗಳಲ್ಲಿ ಪೂಜೆಗೊಂಡು ಸಮರ್ಪಣೆಗೊಳ್ಳಲಿರುವ ಸುವರ್ಣ ಗರುಡ ಮೂರ್ತಿಯ ಜಾತ್ರೆ ಮೂಡುಬಿದಿರೆಯನ್ನು ಅಕ್ಟೋಬರ್ ಹತ್ತರಂದು ಸಂಜೆ 5: 30 ಕ್ಕೆ ಪ್ರವೇಶಿಸಿತು.
ಸಾವಿರಾರು ಭಕ್ತಾದಿಗಳೊಂದಿಗೆ 18 ಪೇಟೆಯ ಮಂಜೇಶ್ವರ ದೇವಳದ ಆಡಳಿತ ಮಂಡಳಿಯಲ್ಲಿರುವ ಮೂಡಬಿದ್ರೆ ಪೇಟೆಯ ಪ್ರತಿನಿಧಿ ರಾಘವೇಂದ್ರ ಕಾಮತ್, ಮೂಡುಬಿದಿರೆ ಹನುಮಂತ ಹಾಗೂ ವೆಂಕಟರಮಣ ದೇವಳದ ಆಡಳಿತ ಮುಕ್ತೇಸರ ಜಿ ಉಮೇಶ್ ಪೈ, ಇತರ ಪದಾಧಿಕಾರಿಗಳಾದ ರಾಮನಾಥ್ ಭಟ್, ಮನೋಜ್ ಶೆಣೈ, ರಾಜೇಶ್ ಮಲ್ಯ, ಶಾಂತಾರಾಮ್ ಕುಡ್ವ, ತುಕಾರಾಮ ಮಲ್ಯ, ಏಕನಾಥ ಮಲ್ಯ, ನರಸಿಂಹ ಕಾಮತ್, ಮುರಳಿದರ ಭಟ್ ಮತ್ತು ಶ್ರೀನಿವಾಸ ಕಿಣಿ ಅವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ರಾತ್ರಿ ಕಾರ್ಕಳ ಪೇಟೆಯ ದೇವಾಲಯದಲ್ಲಿ ರಥ ತಂಗಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here