ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸುವರ್ಣ ಸಂಭ್ರಮ

0
49


ಸಮಿತಿಯ ಅಧ್ಯಕ್ಷರಾಗಿ ಎಚ್.ಜನಾರ್ಧನ್.‌ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಆಚಾರ್ಯ.

ಹೆಬ್ರಿ : ಹೆಬ್ರಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಸುವರ್ಣ ಸಂಭ್ರಮದಲ್ಲಿದ್ದು ಸಮಿತಿಯ ಅಧ್ಯಕ್ಷರಾಗಿ ಎಚ್.‌ ಜನಾರ್ಧನ್‌ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಚ್.‌ ರಾಜೇಶ ಆಚಾರ್ಯ ಮಠದಬೆಟ್ಟು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎಚ್.ಗುಂಡೂ ನಾಯಕ್‌, ಏಚ್.‌ ಭಾಸ್ಕರ ಜೋಯಿಸ್‌, ಎಚ್.ಪ್ರವೀಣ್‌ ಬಲ್ಲಾಳ್‌, ಎಚ್.‌ ಯೋಗೀಶ ಭಟ್‌, ಉಪಾಧ್ಯಕ್ಷರಾಗಿ ಪ್ರಕಾಶ ಮಲ್ಯ, ದಿವಾಕರ ಶೆಟ್ಟಿ, ಎಚ್.ಕೆ.ಸುಧಾಕರ್‌, ಜೊತೆ ಕಾರ್ಯದರ್ಶಿಯಾಗಿ ಶಂಕರ ಶೇರಿಗಾರ್‌, ಕೋಶಾಧಿಕಾರಿ ದೇವಾನಂದ ನಾಯಕ್‌ ಆಯ್ಕೆಯಾಗಿದ್ದಾರೆ. ಗಣೇಶೋತ್ಸವದ ಸುವರ್ಣ ಸಂಭ್ರಮದ ಯಶಸ್ಸಿಗಾಗಿ ಹಲವರನ್ನು ಮಾರ್ಗದರ್ಶಕರು, ಗೌರವ ಸಲಹೆಗಾರರರು, ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ೧೯ ಉಪ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿಗೆ ಪ್ರವೀಣ್‌ ಕುಮಾರ್‌ ಚೈತನ್ಯ ಯುವ ವೃಂದ, ವೇದಿಕೆ ಸಮಿತಿಗೆ ಪ್ರಸಾದ್‌ ಶೆಟ್ಟಿ, ಅನ್ನಸಂತರ್ಪಣಾ ಸಮಿತಿ ವಿಜೇಂದ್ರ ಶೆಟ್ಟಿ, ಮಾಧ್ಯಮ ಸಮಿತಿ ಸುಕುಮಾರ್‌ ಮುನಿಯಾಲ್‌, ಪ್ರಸಾದ ವಿತರಣೆ ಸಂತೋಷ ನಾಯಕ್‌, ಪ್ರಚಾರ ಸಮಿತಿ ಸುಧೀಪ್‌ ಭಟ್‌, ಪೂಜಾ ಸಮಿತಿ ಎಚ್‌. ನಾಗರಾಜ ಜೋಯಿಸ್‌, ಮೆರವಣಿಗೆ ಸಮಿತಿ ಅರುಣ್‌ ಹೆಗ್ಡೆ, ಕ್ರೀಡಾ ಸಮಿತಿ ಕರುಣಾಕರ ದೇವಾಡಿಗ, ಪಾರ್ಕಿಂಗ್‌ ಸಮಿತಿ ವಸಂತ ಶೆಟ್ಟಿ ನಡುಬೀಡು, ಸಾಂಸ್ಕೃತಿಕ ಸಮಿತಿ ಪ್ರಕಾಶ ಶೆಟ್ಟಿ ಕಲ್ಲಿಲ್ಲು, ಸೇವಾ ಕೌಂಟರ್‌ ಸಮಿತಿ ಮುದ್ದು ಪೂಜಾರಿ, ಪ್ರಕಟಣಾ ಸಮಿತಿ ಟಿ.ಜಿ.ಆಚಾರ್ಯ, ಆಲಂಕಾರ ಸಮಿತಿ ಉಮೇಶ ನಾಯಕ್‌, ಸ್ವಚ್ಚತಾ ಸಮಿತಿ ಸುಧಾಕರ ಹೆಗ್ಡೆ, ಪುರ ಶೃಂಗಾರ ಸಮಿತಿ ವಿಜಯ ಹೆಗ್ಡೆ, ಕೆರೆ ಉಸ್ತುವಾರಿ ಸಮಿತಿ ಮುದ್ದುಕೃಷ್ಣ, ಉಗ್ರಾಣ ಸಮಿತಿ ಸುಂದರ ಪೂಜಾರಿ ಹಾಗೂ ದೈಹಿಕ ಶಿಕ್ಷಕರ ಸಮಿತಿಗೆ ನಿತ್ಯಾನಂದ ಶೆಟ್ಟಿ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here