ಅ. 27 ರಂದು ಜಿ.ಎಸ್.ಬಿ.ಸಮಾಜದ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಉದ್ಘಾಟನೆ

0
23

ದಾವಣಗೆರೆಯ ಗೌಡ ಸಾರಸ್ವತ ಸಮಾಜದ ಆಶ್ರಯದಲ್ಲಿ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾಜದ ಲಾಂಛನ ಲೋಕಾರ್ಪಣೆ ಸಮಾರಂಭ ಆಗಸ್ಟ್ 27 ರಂದು ಬುಧವಾರ ಬೆಳಿಗ್ಗೆ 11-30ಕ್ಕೆ ನಗರದ ಎಂ.ಸಿ.ಸಿ.`ಎ’ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆ ಮತ್ತು ಸಮಾಜದ ಲಾಂಛನವನ್ನು ಲೋಕಾರ್ಪಣೆಯನ್ನು ಸಮಾಜದ ಹಿರಿಯ ಚೇತನ ದಾವಣಗೆರೆಯ ಬಿ.ಡಿ.ಟಿ. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಕೋಟ ಮೋಹನ್‌ದಾಸ್ ಹೆಗಡೆಯವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಅಮಿತಾ ಡಾ. ವೇಣುಗೋಪಾಲ್ ಪೈ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಮಾಜಿ ಅಧ್ಯಕ್ಷರಾದ ಕಿರಣ್ ಪಾಂಡುರAಗ ವಾಲವಾಲ್ಕರ್, ಸಮಾಜದ ಮಹಿಳಾ ವಿಭಾಗದ ಹಿರಿಯ ಚೇತನ ವಸಂತಿ ವಿಠಲ್‌ದಾಸ್ ಶೆಣೈ, ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷರಾದ ಉಷಾ ಉದಯ ವಾಲವಾಲ್ಕರ್, ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ಆಗಮಿಸಲಿದ್ದಾರೆ.
ಸಮಾಜದ ಐವತ್ತನೇಯ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವದ ಈ ವಿಜೃಂಭಣೆಯ ಅಪರೂಪದ ಸಮಾರಂಭಕ್ಕೆ ನಮ್ಮ ಸಮಾಜದ ಎಲ್ಲಾ ಬಂಧು-ಬಾAಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಮಾಜದ ಖಜಾಂಚಿ ಆರ್.ವಿ.ಶೆಣೈ ಹಾಗೂ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here