ಬೆಂಗಳೂರು ವಾಹನ ಸವಾರರಿಗೆ ಸಿಹಿ ಸುದ್ದಿ : ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಡಿಕೆ ಶಿವಕುಮಾರ್ ಚಾಲನೆ

0
99

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 40 ಕಿಲೋ ಮೀಟರ್ ಮೆಟ್ರೋ-ಸಂಯೋಜಿತ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ನಿರ್ಮಿಸಲಾಗುವುದು. ಅದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ಮಾಹಿತಿ ನೀಡುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇದರಿಂದ ವಿಳಂಬವಾಗುತ್ತಿದ್ದ ನಮ್ಮ ಮೆಟ್ರೋ ಯೋಜನೆಗೂ ಶೀಘ್ರವೇ ವೇಗ ಸಿಗಲಿದೆ.

ಬಹುಕೋಟಿ (1.5 ಲಕ್ಷ ಕೋಟಿ ರೂ.) ವೆಚ್ಚದಲ್ಲಿ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ದೃಷ್ಟಿಕೋನದ ಭಾಗವಾಗಿ 2025ರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ಬಹು ಮಾದರಿ ಸಾರಿಗೆ ದಕ್ಷತೆ ಹೆಚ್ಚಿಸುವ ಭಾಗವಾಗಿ ನಮ್ಮ ಮೆಟ್ರೋ ಹಂತ 3ರ ಎರಡು ಎತ್ತರಿಸಿದ ಕಾರಿಡಾರ್ ಜೊತೆಗೆ ನಿರ್ಮಾಣವಾಗಲಿದೆ. ರಾಗಿಗುಡ್ಡ ಪ್ರಸನ್ನಾಂಜನೇಯ ಸ್ವಾಮಿ ಮೆಟ್ರೋ ನಿಲ್ದಾಣ (ಹಳದಿ ಮಾರ್ಗ) ದಿಂದ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್ ನಂತೆ ಈ ಎರಡು ಕಾರಿಡಾರ್ ಜೊತೆಗೆ ನಿರ್ಮಾಣವಾಗಲಿದೆ. ಬರೋಬ್ಬರಿ 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು 40 ಕಿಲೋ ಮೀಟರ್ ಮೆಟ್ರೋ (Metro Orange Line) ಮಾರ್ಗದೊಂದಿಗೆ ಸಂಯೋಜಿಸಲಾಗುತ್ತದೆ. ಈ ಸಂಬಂಧ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಯೋಜನೆಯ ಡಿಪಿಆರ್ ಸಿದ್ಧತೆ ಆರಂಭವಾಗಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here