ಶವರ್ಮಾ ಪ್ರಿಯರಿಗೆ ಗುಡ್ ನ್ಯೂಸ್ ; KFC ಯಿಂದ ಬಂತು ‘ಕ್ರಿಸ್ಪಿ ಶವರ್ಮಾ’ ರಾಪ್ !

0
14

ಬೆಂಗಳೂರು : ಭಾರತದಾದ್ಯಂತ ಇರುವ ಶವರ್ಮಾ ಪ್ರಿಯರಿಗೆ ಒಂದು ಗುಡ್ ನ್ಯೂಸ್! KFC ಇಂಡಿಯಾ ಈಗ ಹೊಸದಾದ ‘ಕ್ರಿಸ್ಪಿ ಶಾವರ್ಮಾ’ (Crispy ShaWOWrma) ರಾಪ್ ಅನ್ನು ಬಿಡುಗಡೆ ಮಾಡಿದೆ.

ಈ ಹೊಸ ಮೆನು ಐಟಂ ಚಿರಪರಿಚಿತ ಶವರ್ಮಾಗೆ KFC ನೀಡಿದ ಒಂದು ವಿಭಿನ್ನ ಟ್ವಿಸ್ಟ್ ಆಗಿದೆ. ಈ ‘ಕ್ರಿಸ್ಪಿ ಶಾವರ್ಮಾ’ ರಾಪ್, ರುಚಿಕರವಾಗಿ ಸುಟ್ಟ ಟೋರ್ಟಿಲ್ಲಾ (tortilla) ರಾಪ್ ಅನ್ನು ಒಳಗೊಂಡಿದ್ದು, ಅದರೊಳಗೆ KFCಯ ಐಕಾನಿಕ್ ಪೆರಿ-ಪೆರಿ ಚಿಕನ್ ಸ್ಟ್ರಿಪ್ಸ್, ಕ್ರೀಮಿ ಶವರ್ಮಾ ಮಯೋನೈಸ್, ತಾಜಾ ಲೆಟಿಸ್ ಮತ್ತು ಟ್ಯಾಂಗಿ ಪಿಕಲ್ಡ್ ಮೆಡಿಟರೇನಿಯನ್ ತರಕಾರಿಗಳನ್ನು ತುಂಬಲಾಗಿರುತ್ತದೆ.

ಕೇವಲ ₹169 ರಿಂದ ಪ್ರಾರಂಭವಾಗುವ ಈ ಹೊಸ ‘ಕ್ರಿಸ್ಪಿ ಶಾವರ್ಮಾ’ ರಾಪ್ ಭಾರತದಾದ್ಯಂತ ಇರುವ 1300ಕ್ಕೂ ಹೆಚ್ಚು KFC ರೆಸ್ಟೋರೆಂಟ್‌ಗಳಲ್ಲಿ ಡೈನ್-ಇನ್ ಮತ್ತು ಟೇಕ್‌ಅವೇಗಾಗಿ ಲಭ್ಯವಿದೆ. ಅಷ್ಟೇ ಅಲ್ಲದೆ, ಇದನ್ನು KFC ಆಪ್, ವೆಬ್‌ಸೈಟ್ (https://online.kfc.co.in/) ಅಥವಾ ಪ್ರಮುಖ ಫುಡ್ ಡೆಲಿವರಿ ಆಪ್‌ಗಳ ಮೂಲಕವೂ ಆರ್ಡರ್ ಮಾಡಬಹುದು.

LEAVE A REPLY

Please enter your comment!
Please enter your name here