ಹೆಬ್ರಿ: ನಮ್ಮೆಲ್ಲರ ಆದರ್ಶ, ಸರಳ ಮತ್ತು ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರು ಇಹಲೋಕ ತ್ಯಜಿಸಿ ಆರು ವರ್ಷ ಕಳೆದಿದೆ. ಆದರೆ ಅವರ ನೆನಪು ಜನಮಾನಸದಲ್ಲಿ ಇಂದಿಗೂ ಇದೆ. ಅವರು ಕಾರ್ಯಚಟುವಟಿಕೆಯಲ್ಲಿ ಜನಪರ ಕಾಳಜಿ ಹೊಂದಿದ್ದರು. ರಾಜಕೀಯವಾಗಿ ನಮ್ಮ ಸಿದ್ದಾಂತಗಳು, ಐಡಿಯೋಲಜಿಗಳು ಬೇರೆ ಬೇರೆ ಆಗಿದ್ದರೂ ವೈಯುಕ್ತಿಕ ವಿರೋಧ ಇರಲಿಲ್ಲ. ಗೌರವಕ್ಕೆ ಪರಸ್ಪರ ಕೊರತೆ ಕಾಣಲಿಲ್ಲ. ವ್ಯಕ್ತಿನಿಷ್ಠೆ, ತತ್ವನಿಷ್ಠ ಹಾಗೂ ಪಕ್ಷನಿಷ್ಠೆ ಹೊಂದಿದ್ದ ಅವರು ಸಾರ್ವಜನಿಕ ಜೀವನದಲ್ಲಿ ಪರಿಪೂರ್ಣತೆ ಕಂಡಿದ್ದರು. ಮುಂದಿನ 50 ವರ್ಷ, ನೂರು ವರ್ಷ ಕಳೆದರೂ ಗೋಪಾಲ ಭಂಡಾರಿ ನಮ್ಮ ನಡುವೆ ಜೀವಂತ ಆಗಿರುತ್ತಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಹೆಬ್ರಿ ಮತ್ತು ಕಾರ್ಕಳ ವತಿಯಿಂದ ಇಂದು ಹೆಬ್ರಿಯಲ್ಲಿ ಜರಗಿದ ಸ್ಮರಣಾರ್ಥ ವೃತ್ತ ರಚನೆ, ಪುತ್ಥಳಿ ಸ್ಥಾಪನೆ ಮತ್ತು ಅವರ ಜೀವನ ಚರಿತ್ರೆಯ ಬಗೆಗಿನ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಮಾಜಿ ಸಚಿವರುಗಳಾದ ವಿನಯಕುಮಾರ್ ಸೊರಕೆ, ಬಿ. ರಮಾನಾಥ ರೈ, ಜ್ಞಾನಸುಧಾ ಕಾಲೇಜಿನ ಡಾ. ಸುಧಾಕರ ಶೆಟ್ಟಿ, ಉಡುಪಿ ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉದ್ಯಮಿ ಸತೀಶ್, ಎಸ್.ಆರ್. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾಗಾರಾಜ್ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ, ಹೆಗ್ರೆ ಗ್ರಾ.ಪಂ. ಅಧ್ಯಕ್ಷ ತಾರನಾಥ ಬಂಗೇರ, ದಿನೇಶ್ ಹೆಗ್ಡೆ ಕುಂದಾಪುರ, ಸುಭೋದ್ ರಾವ್ , ತಾರಾನಾಥ ಬಂಗೇರ , ದಿನೇಶ್ ಶೆಟ್ಟಿ, , ಧರ್ಮಪತ್ನಿ ಪ್ರಕಾಶಿನಿ ಗೋಪಾಲ ಭಂಡಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ದಿನೇಶ್ ಶೆಟ್ಟಿ, ಎಸ್ ಕೆಡಿಆರ್‌ಡಿಯ ಲೀಲಾವತಿ, ಅಣ್ಣಪ್ಪ ಪೂಜಾರಿ, ವಾದಿರಾಜ ಶೆಟ್ಟಿ, ವೇದಿಕೆ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಪ್ರಣೀತಾ ಪ್ರಾರ್ಥಿಸಿದರು. ಗೋಪಾಲ ಭಂಡಾರಿ ಅಭಿಮಾನ ಬಳಗ ವೇದಿಕೆಯ ಕಾರ್ಯದರ್ಶಿ ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿದರು.
Home Uncategorized ಗೋಪಾಲ ಭಂಡಾರಿಯವರು ವ್ಯಕ್ತಿನಿಷ್ಠೆ, ತತ್ವನಿಷ್ಠೆ-ಪಕ್ಷನಿಷ್ಠೆ ಹೊಂದಿದ್ದ ಆದರ್ಶ ರಾಜಕಾರಣಿ: ಸುನೀಲ್ ಕುಮಾರ್