ಕದ್ರಿ ವಲಯದ ಪೂರ್ವ ಕಾರ್ಯಕ್ಷೇತ್ರದ ಆದರ್ಶ ಒಕ್ಕೂಟದಲ್ಲಿ ಈ ದಿನ ಆಟಿದ ಗೌಜಿ – ಗಮ್ಮತ್‌ ಕಾರ್ಯಕ್ರಮ

0
209

ಕದ್ರಿ ವಲಯದ ಪೂರ್ವ ಕಾರ್ಯಕ್ಷೇತ್ರದ ಆದರ್ಶ ಒಕ್ಕೂಟದಲ್ಲಿ ಈ ದಿನ ಆಟಿದ ಗಮ್ಮತ್ತು ದ ಲೇಸುಧ ಕಾರ್ಯಕ್ರಮವನ್ನು ಚಂಡೇಶ್ವರಿ ದೈವಸ್ಥಾನದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಯೋಜನೆಾಧಿಕಾರಿಯಾದ ಸುರೇಂದ್ರ ಸರ್ ರವರು ದೀಪವನ್ನು ಉದ್ಘಾಟಿಸುವ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ನಾಗವೇಣಿ ಅವರು ಹಾಜರಿದ್ದರು.
ವೇದಿಕೆಯಲ್ಲಿ ಮೇಲ್ವಿಚಾರಕಿ ಶ್ರೀಮತಿ ಸವಿತಾ ಹೆಗ್ಡೆ ಹಾಗೂ ಸೇವಾ ಪ್ರತಿನಿಧಿ ಸುರೇಖಾ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಒಕ್ಕೂಟದ ಅಧ್ಯಕ್ಷರಾದ ಬಬಿತಾ ರವರು ವಹಿಸಿದರು. ಸ್ವಾಗತ ಕಾರ್ಯಕ್ರಮವನ್ನು ಉಪಾಧ್ಯಕ್ಷರಾದ ಧನಲಕ್ಷ್ಮಿ ಧನ್ಯವಾದ ಕಾರ್ಯಕ್ರಮವನ್ನು ಜಯಲಕ್ಷ್ಮಿ ಅವರು
ಕಾರ್ಯಕ್ರಮದ ನಿರೂಪಣೆಯನ್ನು ಶಿವಗಿರಿ ಸಂಘದ ದಿನೇಶ್ ಕುಮಾರ್ ಅವರು ನೆರವೇರಿಸಿದರು. ಆಟೋಟ ಸ್ಪರ್ಧೆ ಮನರಂಜನೆ ಕಾರ್ಯಕ್ರಮ ಹಾಗೂ ಆಟಿದ ದಿನಸುಗಳ ತಯಾರಿಯೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here