ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್ ಬೋಧಿಸಿದರು. 2025 -2026ನೇ ಸಾಲಿನ ಶಾಲಾ ಮುಖ್ಯಮಂತ್ರಿ ಯಾಗಿ ಶ್ರಾವಣಿ ಡಿ ಪೂಜಾರಿ, ಉಪಮುಖ್ಯಮಂತ್ರಿ ಯಾಗಿ ಭವಿಷ್, ಗೃಹಮಂತ್ರಿಯಾಗಳಾಗಿ ಮನ್ವಿತ್, ಮಹಮ್ಮದ್ ಜಸ್ಮಿರ್ ಶಿಕ್ಷಣ ಮಂತ್ರಿಗಳಾಗಿ ಅಕ್ಷಯ್, ಫಾತಿಮತ್ ಸನಾ, ಆರೋಗ್ಯಮಂತ್ರಿಗಳಾಗಿ ಫಾತಿಮತ್ ಸುರೈಫಾ, ಆಯಿಷತ್ ಫರ್ಹ, ಸಾಂಸ್ಕೃತಿಕ ಮಂತ್ರಿಗಳಾಗಿ ಖುಷಿ ಪಿ, ಮೌಲ್ಯ, ಆಹಾರ ಮಂತ್ರಿಗಳಾಗಿ ಮಹಮ್ಮದ್ ಶಹೀಮ್, ಮಹಮ್ಮದ್ ಅಜಿಮಲ್, ಕ್ರೀಡಾ ಮಂತ್ರಿಗಳಾಗಿ ಮಹಮ್ಮದ್ ಸಮ್ಮಾಜ್, ಮಹಮ್ಮದ್ ಹಾಶಿಮ್, ನೀರಾವರಿ ಮಂತ್ರಿಗಳಾಗಿ ಚಿರಂಜನ್, ಮಹೇಶ್ ವಾರ್ತಾ ಮಂತ್ರಿಗಳಾಗಿ ಲಿಖಿತಾ, ಅಬ್ದುಲ್ ಸಮದ್, ಸ್ವಚ್ಛತಾ ಮಂತ್ರಿ ಗಳಾಗಿ ಮಹಮ್ಮದ್ ಸುಫೈರ್, ಖತೀಜ ಅಸ್ಫಿಯ, ಗ್ರಂಥಾಲಯ ಮಂತ್ರಿಗಳಾಗಿ ನಸೀಹಾ ಫರ್ಝನಾ, ಮಹಮ್ಮದ್ ತಫೀಮ್, ತೋಟಗಾರಿಕಾ ಮಂತ್ರಿ Dad’s ಗಗನ್, ಮೊಬೈನಾ, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ರಂಶೀದ್ ಪ್ರಮಾಣ ವಚನ ಸ್ವೀಕರಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.