ಸರಕಾರಿ ಪ್ರೌಢ ಶಾಲೆ ಅಳದಂಗಡಿ; 79ನೇ ಸ್ವಾತಂತ್ರ್ಯ ದಿನಾಚರಣೆ, ಸಾಧಕರಿಗೆ ಸನ್ಮಾನ

0
191

ಕಾಲೇಜಿನ ಪ್ರಾಂಶುಪಾಲರು ಧ್ವಜಾರೋಹಣ ಮಾಡುವುದರ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶಾಂತಿ , ಶಿಕ್ಷಕರ ವೃಂದ, ಕಾಲೇಜಿನ ಉಪನ್ಯಾಸಕರು, Sdmc ಕಾರ್ಯಧ್ಯಕ್ಷರು ಆಗಿರುವ ಸದಾಶಿವ ಪೂಜಾರಿ, ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಸಭಾ ಕಾರ್ಯಕ್ರಮದಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಇವರ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ನೆರವೇರಿತು. ಸಮಾಜ ಸೇವೆಯಲ್ಲಿ ವಿಶೇಷ ಸಾಧನೆ ಮಾಡಿದ ಖ್ಯಾತ ವೈದ್ಯರಾದ ಡಾ| ಎನ್ .ಎಮ್ ತುಳುಪುಲೆ ಇವರಿಗೆ ಸನ್ಮಾನ ಹಾಗೂ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರಿಗೆ ಅವರ ವಿಶೇಷವಾದ ಸೇವೆಗೆ ಸನ್ಮಾನವನ್ನು ಮಾಡಲಾಯಿತು.

ಈ ಬಾರಿ sslc ಪರೀಕ್ಷೆ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಇತರ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು. ನಿವೃತ್ತ ಮುಖ್ಯ ಶಿಕ್ಷಕರು ಯಶೋದರ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರು. ಹರೀಶ್ ಆಚಾರ್ಯ. ಕೃಷ್ಣಪ್ಪ ಪೂಜಾರಿ.. ಪ್ರವೀಣ್. Sdmc ಸದಸ್ಯರು.. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here