ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ; ಸ್ವಾತಂತ್ರೋತ್ಸವ ಸಂಭ್ರಮ

0
199

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮ ದ ಅದ್ಯಕ್ಷತೆಯನ್ನು SDMC ಅಧ್ಯಕ್ಷರಾದ ಸಬೀನಾ ರವರು ವಹಿಸಿಕೊಂಡಿದ್ದರು. ಲಯನ್ಸ್ ಕ್ಲಬ್ ಹಿರಿಯಡ್ಕದ ಉಪಾಧ್ಯಕ್ಷ ಹರೀಶ್ ಹೆಗ್ಡೆ ಯವರು ಧ್ವಜಾರೋಹಣ ಮಾಡಿ ನೆರೆದವರಿಗೆ ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು.

ಕಾರ್ಯಕ್ರಮಕ್ಕಾಗಿ ಮಕ್ಕಳನ್ನು ಜೋಡಿಸಿಕೊಂಡು ಅವರಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ ಶಿಕ್ಷಕಿಯರ ಹೋರಾಟವು ಎಲ್ಲರ ಪ್ರಶoಸೆಗೆ ಒಳಗಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾರ ಹೆಸರನ್ನು ಹೇಳಿ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ದಿನದ ಬಗ್ಗೆ ಕನ್ನಡ ಮತ್ತು ಆಂಗ್ಲಾ ಭಾಷೆಯಲ್ಲಿ ವಿದ್ಯಾರ್ಥಿಗಳಾದ ಆದಿತ್ಯ, ಶ್ರವಣ್ ಬಹಳ ಉತ್ತಮ ಮಟ್ಟದಲ್ಲಿ ವಿಚಾರವನ್ನು ಮಂಡಿಸಿದರು. ವಿದ್ಯಾರ್ಥಿನಿ ಗಳಾದ ಅಶ್ವಿತಮತ್ತು ಪ್ರಣವಿ ದೇಶ ಭಕ್ತಿ ಗೀತೆಯನ್ನು ಇಂಪಾಗಿ ಹಾಡಿದರು. ಶಾಲೆಯ ಮಕ್ಕಳು ತ್ರಿವರ್ಣ ಬಣ್ಣದ ಶಾಲುಗಳನ್ನು ಹಿಡಿದುಕೊಂಡು ಮಾಡಿರುವ ನೃತ್ಯ ಅದ್ದೂರಿಯಾಗಿ ಸಂಪನ್ನ ಗೊಂಡು ನೆರೆದವರ ಮನ ಸೂರೆಗೊಂಡಿತು.

ಇಂದಿನ ಕಾರ್ಯಕ್ರಮಕ್ಕೆ ಉತ್ತಮವಾದ ಧ್ವನಿವರ್ಧಕ ವ್ಯವಸ್ಥೆಯನ್ನು ಕುಮಾರ್ ಸೌಂಡ್ಸ್ ಆತ್ರಾಡಿ ಯ ಮಾಲಕರಾದ ಹರೀಶ್ ಪೂಜಾರಿ ಇವರು ಮಾಡಿದ್ದರು. ಇಂದು ಮಕ್ಕಳಿಗೆ ಕೈ ಚೀಲಗಳಲ್ಲಿ ಮನೆಗೆ ಓಯ್ಯುವಷ್ಟು ಸಿಹಿ ತಿಂಡಿಯ ವ್ಯವಸ್ಥೆ ಆಗಿತ್ತು.

ಸಿಹಿ ತಿಂಡಿ ವ್ಯವಸ್ಥೆ ಯನ್ನು ಪ್ರತ್ಯೇಕ ಪ್ರತ್ಯೇಕ ವಾಗಿ ಲಯನ್ಸ್ ಕ್ಲಬ್ ಹಿರಿಯಡ್ಕ, ಮಹಾಲಿಂಗೇಶ್ವರ ಆಟೋ ನಿಲ್ದಾಣ, SDMC ಅಧ್ಯಕ್ಷೆ ಸಬೀನ, ಶ್ರೀಮತಿ ಪುಷ್ಪ ಪ್ರಭಾಕರ್ ಆಚಾರ್ಯ, ನಿಸರ್ಗ ಆಟೋ ನಿಲ್ದಾಣ, ಅವ್ವಮ್ಮ ರವರು ಮಾಡಿದ್ದರು.

ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರು, SDMC ಸದಸ್ಯರು, ಲಯನ್ಸ್ ಕ್ಲಬ್ ಹಿರಿಯಡ್ಕದ ಸದಸ್ಯರು,ಹಳೆ ವಿದ್ಯಾರ್ಥಿಯರು, ಮಕ್ಕಳ ಪೋಷಕರು, ರಿಕ್ಷಾ ಚಾಲಕ ಮಾಲಕರು, ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು, ಶಿಕ್ಷಕಿಯರು, ಅಡುಗೆ ಸಿಬ್ಬಂದಿ ಯರು, ಉಪಸ್ಥಿತರಿದ್ದರು. ಕಾರ್ಯಕ್ರಮದ ಸರ್ವ ನಿರ್ವಹಣೆ ಯನ್ನು ಮುಖ್ಯ ಶಿಕ್ಷಕಿ ಸರಸ್ವತಿಯವರು ಮಾಡಿದ್ದರು

LEAVE A REPLY

Please enter your comment!
Please enter your name here