ಕೋಡಪದವಿನಲ್ಲಿ ಭವ್ಯ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ : ಸಂಘಟಿತರಾಗಿ ಧರ್ಮ ರಕ್ಷಣೆಗೆ ಮುಂದಾಗಲು ಕರೆ

0
62

ಕಲ್ಲಡ್ಕ : ಹಿಂದೂಗಳ ಸಂಘಟಿತ ಶಕ್ತಿಯ ಆವಿಷ್ಕಾರ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಂಟ್ವಾಳ ತಾಲೂಕಿನ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಭಾನುವಾರ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯು ಅತ್ಯಂತ ಯಶಸ್ವಿಯಾಗಿ ಜರುಗಿತು.

ವ್ಯಸನಮುಕ್ತ ಭಾರತದಿಂದ ಮಾತ್ರ ದೇಶದ ಉಳಿವು ಪ್ರಸಾದ್ ರೈ ಸಭೆಯನ್ನುದ್ದೇಶಿಸಿ ಮಾತನಾಡಿದ ವಕೀಲರಾದ ಪ್ರಸಾದ್ ರೈ ಅವರು, “ಮೆಕಾಲೇ ಶಿಕ್ಷಣ ಪದ್ಧತಿಯಿಂದಾಗಿ ಭಾರತದ ಶ್ರೇಷ್ಠ ಗುರು-ಶಿಷ್ಯ ಪರಂಪರೆ ಮತ್ತು ಕುಂಕುಮದ ಸಂಸ್ಕೃತಿ ನಾಶವಾಗುತ್ತಿದೆ. ಇದರ ಪರಿಣಾಮವಾಗಿ ಇಂದು ಲವ್ ಜಿಹಾದ್ ಹಾಗೂ ಯುವಜನತೆಯಲ್ಲಿ ಮಾದಕ ದ್ರವ್ಯಗಳ ವ್ಯಸನ ಹೆಚ್ಚುತ್ತಿದೆ. ಭಗತ್ ಸಿಂಗ್, ಸಾವರ್ಕರ್ ಅಂತಹ ವೀರರು ನಿರ್ಮಾಣವಾಗಬೇಕಾದರೆ ಭಾರತವು ವ್ಯಸನಮುಕ್ತವಾಗಬೇಕು. ಧರ್ಮ ಉಳಿಯದಿದ್ದರೆ ದೇಶ ಉಳಿಯದು. ಆದ್ದರಿಂದ ಪ್ರತಿಯೊಬ್ಬರೂ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನು ದೇಶ ಮತ್ತು ಧರ್ಮಕ್ಕಾಗಿ ಮೀಸಲಿಡಬೇಕು,” ಎಂದು ಕರೆ ನೀಡಿದರು.

ಧರ್ಮದ ವೈಜ್ಞಾನಿಕತೆಯನ್ನು ಅರಿತು ಧರ್ಮಪಾಲನೆಯನ್ನು ಮಾಡಿರಿ – ಸೌ. ಲಕ್ಷ್ಮಿ ಪೈ

ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಅವರು ಮಾತನಾಡಿ, “ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆ ವಿಜ್ಞಾನ ಮತ್ತು ಆಧ್ಯಾತ್ಮಿಕ ಅಧಿಷ್ಠಾನವಿದೆ. ಇಂದು ಹಿಂದೂಗಳು ಧರ್ಮದಿಂದ ದೂರವಾಗುತ್ತಿರುವುದರಿಂದಲೇ ಅನೇಕ ಆಘಾತಗಳನ್ನು ಎದುರಿಸುತ್ತಿದ್ದಾರೆ. ಬರಲಿರುವ ಭೀಕರ ಆಪತ್ಕಾಲವನ್ನು ಎದುರಿಸಲು ಆಧ್ಯಾತ್ಮಿಕ ಬಲದ ಅವಶ್ಯಕತೆಯಿದೆ. ಪ್ರತಿಯೊಬ್ಬರೂ ಇಂದಿನಿಂದಲೇ ಸಾಧನೆಯನ್ನು ಪ್ರಾರಂಭಿಸಿ ಧರ್ಮ ರಕ್ಷಣೆಯ ಸಂಕಲ್ಪ ಮಾಡಬೇಕು,” ಎಂದರು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಸಂಘಟಿತರಾಗಿರಿ ! – ವಿಜಯ ಕುಮಾರ್

ಹಿಂದೂ ಜನಜಾಗೃತಿ ಸಮಿತಿಯ ಶ್ರೀ ವಿಜಯ ಕುಮಾರ್ ಮಾತನಾಡಿ, “ಸಮಿತಿಯು ಕಳೆದ 23 ವರ್ಷಗಳಿಂದ ದೇಶಾದ್ಯಂತ ನಡೆಸುತ್ತಿರುವ ಸಭೆಗಳ ಫಲವಾಗಿ ಇಂದು ಹಿಂದೂ ರಾಷ್ಟ್ರದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಕುಂಭಮೇಳದ ಸಂತರು ಹಾಗೂ ಪೂಜನೀಯ ವೀರೇಂದ್ರ ಶಾಸ್ತ್ರಿಯವರಂತಹ ಮಹನೀಯರು ಇಂದು ಬಹಿರಂಗವಾಗಿ ಹಿಂದೂ ರಾಷ್ಟ್ರವನ್ನು ಸಮರ್ಥಿಸುತ್ತಿರುವುದು ನಮ್ಮ ಅಭಿಯಾನದ ಫಲಶ್ರುತಿಯಾಗಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಹಾಗೂ ಜನಸಂಖ್ಯಾ ಸ್ಫೋಟದಂತಹ ಸಂಚುಗಳ ವಿರುದ್ಧ ನಾವೆಲ್ಲರೂ ಧರ್ಮ ಯೋಧರಾಗಿ ಹೋರಾಡಬೇಕಿದೆ,” ಎಂದು ತಿಳಿಸಿದರು.

ಈ ಜಾಗೃತಿ ಸಭೆಯಲ್ಲಿ ರಾಜಾರಾಮ್ ಭಟ್ ,ಉದ್ಯಮಿ ಇಕೋ ಬ್ಲಿಸ್ ಬಲಿಪಗುಳಿ, ಕಿಶನ್ ಭಟ್ ವೀರಾಂಜನೇಯ ದೇವಸ್ಥಾನ ಕೋಡಪದವು ಮುಖ್ಯಸ್ಥರು, ಶ್ರೀ ಶ್ರೀ. ಶಿವಾನಂದ ಸರಸ್ವತಿ ಸ್ವಾಮೀಜಿ ಮುಳಿಯ ಅಳಕೆಕೋಡಪದವು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 300ಕ್ಕೂ ಅಧಿಕ ಧರ್ಮಪ್ರೇಮಿಗಳು ಪಾಲ್ಗೊಂಡು ಹಿಂದೂ ರಾಷ್ಟ್ರ ಸ್ಥಾಪನೆಯ ದಿವ್ಯ ಸಂಕಲ್ಪವನ್ನು ಮಾಡಿದರು.

LEAVE A REPLY

Please enter your comment!
Please enter your name here