ಅಕ್ರಮ ಲೈಂಗಿಕ ಕ್ರಿಯೆ ವೇಳೆ ಅಜ್ಜಿಯ ಕೈಗೆ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮೊಮ್ಮಗಳು..!; ಮುಂದೇನಾಯಿತು ಗೊತ್ತಾ..?!

0
167

ಜಲೌನ್: ಬಾಯ್​ಫ್ರೆಂಡ್​​ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಮೊಮ್ಮಗಳು ಅಜ್ಜಿಯ ಕೈಗೆ ಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ. ಗೆಳೆಯನ ಜತೆ ಏಕಾಂತದಲ್ಲಿರುವುದನ್ನು ಅಜ್ಜಿ ನೋಡಿದ್ದಕ್ಕೆ ಮೊಮ್ಮಗಳು ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜಲೌನ್​​ನಲ್ಲಿ ನಡೆದಿದೆ. 75 ವರ್ಷದ ಅಜ್ಜಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವತಿಯನ್ನು ಬಂಧಿಸಲಾಗಿದೆ. ಅಪರಾಧ ಮಾಡಿದ ನಂತರ ಗೆಳೆಯ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ.

ಘಟನೆ ಹಿನ್ನೆಲೆ ಏನು? ಟ್ರೂ ಸ್ಟೋರಿಯ ವರದಿಗಳ ಪ್ರಕಾರ, ಪಲ್ಲವಿ ಎಂದು ಗುರುತಿಸಲ್ಪಟ್ಟ ಯುವತಿ ತಡರಾತ್ರಿ ಗೆಳೆಯ ದೀಪಕ್ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಪರಮ ದೇವಿ ಶಬ್ದ ಕೇಳಿ ಕೋಣೆಗೆ ಪ್ರವೇಶಿಸಿದಾಗ ಇಬ್ಬರೂ ಹಾಸಿಗೆಯ ಮೇಲೆ ಒಟ್ಟಿಗೆ ಇರುವುದನ್ನು ಕಂಡರು. ಅಜ್ಜಿ ತನ್ನ ಸಂಬಂಧವನ್ನು ಬಹಿರಂಗಪಡಿಸುತ್ತಾಳೆ ಎಂಬ ಭಯದಿಂದ ಪಲ್ಲವಿ ಗಾಬರಿಗೊಂಡಳು.

ದೀಪಕ್ ಜತೆ ಸೇರಿ ಅಜ್ಜಿಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಸಾಯಿಸಿದ್ದಾಳೆ. ಕುಟುಂಬವನ್ನು ದಾರಿ ತಪ್ಪಿಸಬೇಕೆಂದು ಕಳ್ಳ ಕಳ್ಳ ಎಂದು ಪಲ್ಲವಿ ಕಿರುಚಿದ್ದಳು. ನಂತರ ಆಕೆಯ ತಂದೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ ತನಿಖೆಯ ಸಮಯದಲ್ಲಿ ಸತ್ಯ ಹೊರಬಿತ್ತು. ಪಲ್ಲವಿಯನ್ನು ಬಂಧಿಸಲಾಗಿದ್ದು, ಆಕೆಯ ಗೆಳೆಯ ದೀಪಕ್ ಪರಾರಿಯಾಗಿದ್ದಾನೆ.

ವಿಚಾರಣೆ ಸಮಯದಲ್ಲಿ ಪಲ್ಲವಿ ಅವಮಾನದ ಭಯದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಜ್ಜಿ ನೋಡಿದ್ದನ್ನು ಯಾರ ಬಳಿಯಾದರೂ ಹೇಳಿದರೆ ಎನ್ನುವ ಭಯದಲ್ಲಿ ಕೊಲೆ ಮಾಡಿದೆ ಎಂದು ಹೇಳಿದ್ದಾಳೆ. ಈಗ ತಲೆಮರೆಸಿಕೊಂಡಿರುವ ದೀಪಕ್​ನದ್ದು ಈ ಕೊಲೆಯಲ್ಲಿ ಮುಖ್ಯ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಈ ಕೊಲೆ ನಡೆದ ರಾತ್ರಿ ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟು ಆತ ಪರಾರಿಯಾಗಿದ್ದಾನೆ.

LEAVE A REPLY

Please enter your comment!
Please enter your name here