ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಮಾದರಿ ಪ್ರಾಥಮಿಕ ಶಾಲೆ ಕೆ.ಎಸ್ ರಾವ್ ನಗರ ಇಲ್ಲಿಗೆ ಲಯನ್ಸ್ ಕ್ಲಬ್ ಇನ್ಸ್ಪೈರ್ ನ ನಿಕಟ ಪೂರ್ವ ಅಧ್ಯಕ್ಷರಾದ ಬಿ. ಶಿವಪ್ರಸಾದ್ ರವರಿಂದ ಶಾಲಾ ಅಭಿವೃದ್ಧಿ ಮಂಡಳಿಗೆ ರೂಪಾಯಿ 5, 000 ಸಹಾಯಧನ ನೀಡಲಾಯಿತು.
ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜ್ಯೋತಿ, ಮುಖ್ಯೋಪಾಧ್ಯಾಯರಾದ ದಿನೇಶ್ ಕೆ., ಲಯನ್ಸ್ ಕ್ಲಬ್ ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷರಾದ ಲ. ವೆಂಕಟೇಶ ಹೆಬ್ಬಾರ್, ಭಾಸ್ಕರ್ ಕಾಂಚನ್ , ಪ್ರತಿಭಾ ಹೆಬ್ಬಾರ್ ಉಪಸ್ಥಿತರಿದ್ದರು.