ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಈ ಅನುದಾನದಡಿ ಕೆಳಕಂಡ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ :
ಕುಕ್ಕಳ ಗ್ರಾಮದ ಹಟ್ಟತ್ತೋಡಿಯಿಂದ ಕೆಂಪರಿಗೆಯವರೆಗೆ ರಸ್ತೆ– ರೂ.25.00 ಲಕ್ಷ, ಮಾಲಾಡಿ ಗ್ರಾಮದ ಪುರಿಯದಿಂದ ಕುರಿಯೋಡಿ ವರೆಗೆ ರಸ್ತೆ– ರೂ.25.00 ಲಕ್ಷ, ವೇಣೂರು ಗ್ರಾಮದ ಮೂಡ್ಲಾ ಕ್ರಾಸ್‌ನಿಂದ ನತ್ಯಟ್ಟವರೆಗೆ ರಸ್ತೆ – ರೂ.25.00 ಲಕ್ಷ,ನಾರಾವಿ ಗ್ರಾಮದ ದುಗಲಾಯಿ ಗುಡ್ಡೆ ರಸ್ತೆ – ರೂ.25.00 ಲಕ್ಷ, ಕಳೆಂಜ ಗ್ರಾಮದ ಬಂಡೇರಿಯಿಂದ ಬೇಂಗದಗಂಡಿವರೆಗೆ ರಸ್ತೆ – ರೂ.25.00 ಲಕ್ಷ.
ನ್ಯಾಯತರ್ಪು ಗ್ರಾಮದ ಗೋವಿಂದೂರು ರಿಂದ ಕಣಿಯೂರು ಗ್ರಾಮದ ಕಾಪಿನಡ್ಕ -ಪೆರ್ದಡ್ಕ ರಸ್ತೆ – ರೂ.50.00 ಲಕ್ಷ, ಪಟ್ರಮೆ ಗ್ರಾಮದ ಮಣಿಯೇರು ರಸ್ತೆ – ರೂ.15.00 ಲಕ್ಷ, ಪಟ್ರಮೆ ಗ್ರಾಮದ ಓಟಕಜೆ ರಸ್ತೆ – ರೂ.10.00 ಲಕ್ಷ.
ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದ್ದು, ದೈನಂದಿನ ಸಂಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

