ಮೂಡುಬಿದಿರೆ ತಾಲೂಕಿನ ಹದಿನೈದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಹಸಿರು ನಿಶಾನೆ

0
27

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಹದಿನೈದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರಕಾರ ಅನುಮೋದನೆ ನೀಡಿದೆ ಎಂದು ಮುಲ್ಕಿ -ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ತಿಳಿಸಿದ್ದಾರೆ.

ಜ್ಯೋತಿ ನಗರ, ಮಾಂಟ್ರಾಡಿ, ಇರುವೈಲು, ನೆಲ್ಲಿಕಾರು, ಪುಚ್ಚಮೊಗರು, ಬೆಳುವಾಯಿ ಉರ್ದು, ಹಂಡೇಲು, ಮಾರೂರು ಹೊಸಂಗಡಿ, ಪೂಪಾಡಿಕಲ್ಲು, ಪೆರಿಬೆಟ್ಟು, ಕೋಟೆ ಬಾಗಿಲು ಉರ್ದು, ಪಡು ಕೊಣಾಜೆ, ವರ್ಣ ಬೆಟ್ಟು, ಪಣಪಿಲ, ಹಾಗೂ ಪುತ್ತಿಗೆ ಶಾಲೆಗಳಲ್ಲಿ ಈ ವರ್ಷವೇ ಆಂಗ್ಲ ಮಾಧ್ಯಮ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಮೂಡುಬಿದಿರೆ ವಿದ್ಯಾಗಿರಿಯ ಬಿಜೆಪಿ ಕಛೇರಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮುಲ್ಕಿ- ಮೂಡುಬಿದಿರೆ ಮಂಡಲದ ವತಿಯಿಂದ ಪಂಚಾಯತ್ ಅಭ್ಯಾಸ ವರ್ಗದ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿದರು.
ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುನೀಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಮಂಡಲ ಅಧ್ಯಕ್ಷರಾದ ದಿನೇಶ್‌ ಪುತ್ರನ್, ಅಭ್ಯಾಸ ವರ್ಗದ ಜಿಲ್ಲಾ ಸಹಸಂಚಾಲಕರಾದ ಸುಧಾಕ‌ರ್ ಆಚಾರ್ಯ, ಮಂಡಲ ಪ್ರಭಾರಿಗಳಾದ ಜಯಂತ್ ಕೋಟ್ಯಾನ್‌, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಜಗನ್ನಾಥ ಬೆಳುವಾಯಿ, ಮಂಡಲ ಸಂಚಾಲಕರಾದ ಜಯಾನಂದ್‌ ಮೂಲ್ಕಿ, ಸಹಸಂಚಾಲಕರು ಜಯಂತ್ ಸಾಲ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್‌, ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ ಒಂಟಿಕಟ್ಟೆ, ಪಕ್ಷದ ಹಿರಿಯರಾದ ಬಾಹುಬಲಿ ಪ್ರಸಾದ್, ಭುವನಾಭಿರಾಮ ಉಡುಪ, ಕೆ ಆ‌ರ್ ಪಂಡಿತ್, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಹಾಗೂ ಮಂಡಲ ಪದಾಧಿಕಾರಿಗಳು ಮಹಾ ಶಕ್ತಿಕೇಂದ್ರದ ಅಧ್ಯಕ್ಷರುಗಳು ಕಾರ್ಯದರ್ಶಿಗಳು, ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಅನ್ಯನ್ಯ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here