ಕಾಸರಗೋಡು : ಕಾಸರಗೋಡು ಕೋಟೆ ಪೂರ್ವ ಭಾಗದ, ನಾಗರಕಟ್ಟೆಯ ಶ್ರೀ ಭಿಕ್ಷು ಸ್ಥಾಪಿತ ಶ್ರೀ ಶಾರದಾಂಬಾ ಭಜನಾಶ್ರಮದ ಅತೀ ಕಾರಣಿಕ ನಾಗನಕಟ್ಟೆಯ ಭೂಮಿ ಪೂಜೆ ಹಾಗೂ ಕುತ್ತಿಪೂಜೆ ಇಂದು 15.10.2025ರ ಬೆಳಿಗ್ಗೆ ನಡೆಯಿತು. ಶ್ರೀ ಗಣಪತಿ ಭಟ್ ನೇತೃತ್ವದಲ್ಲಿ ಭೂಮಿ ಪೂಜೆ ನಡೆದು ಶ್ರೀ ರಮೇಶ್ ಕಾರಂತ್ ಅವರು ಕುತ್ತಿ ಪೂಜೆ ನಿರ್ವಹಿಸಿ ನಾಗನಕಟ್ಟೆಯ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು. ಈ ಕಾರ್ಯಕ್ರಮ ದಲ್ಲಿ ನಿರ್ಮಾಣ ಸಮಿತಿ ಗೌರವ ಅಧ್ಯಕ್ಷರಾದ ಕೆ. ನಿರಂಜನ್ ಕೊರಕೋಡು, ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ಉಪಾಧ್ಯಕ್ಷರಾದ ವಾಮನ್ ರಾವ್ ಬೇಕಲ್, ಹರಿಶ್ಚಂದ್ರ ತಲಪಾಡಿ, ರಮೇಶ್, ರೋಹಿತಾಕ್ಷ, ಶಶಿಕಾಂತ, ವಿನೋದ, ಪ್ರದೀಪ್ ನಾಯ್ಕ್, ಕೇಶವ, ರಾಜೇಶ್, ಉದಯ, ನವೀನ್ ನಾಯ್ಕ್, ಪ್ರಾಣೇಶ್ ತಲಪಾಡಿ, ಧನಂದೀಪ್, ಮೋಹನ್ ದಾಸ್ ಕೊರಕೋಡು, ಹರೀಶ್ ಕೊರಕೋಡು, ಜಗದೀಶ್ ಕೊರಕೋಡು, ಗಣೇಶ್, ರಘುಕುಲೇಶ್, ಶ್ರೀಕಾಂತ್ ನಾಯ್ಕ್, ನಟರಾಜ್, ಚಿದಂಬರ ಸೂರ್ ಲು ಮುಂತಾದವರಿದ್ದರು.