ಮಕ್ಕಳಂತೆ ಗಿಡ ಬೆಳೆಸಿ ಪರಿಸರ, ಪ್ರವಾಹ ಕಾಪಾಡಿ – ಐವನ್ ಡಿಸೋಜಾ

0
34

ಮಂಗಳೂರು ಕೆಥೋಲಿಕ್ ಸಭಾ, ಮೂಡುಬಿದಿರೆ ಕೆಥೋಲಿಕ್ ಸಭಾ, ಘಟಕಗಳು ಹಾಗೂ ಮೂಡುಬಿದಿರೆ ವಲಯ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜುಲೈ 6 ರಂದು ಮೂಡುಬಿದಿರೆ ಅಲಂಗಾರು ಮೌಂಟ್ ರೋಜರಿ ಸಂಸ್ಥೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಸಾಂಕೇತಿಕವಾಗಿ ಗಿಡ ನೆಟ್ಟು ನೀರು ಎರೆದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉದ್ಘಾಟಿಸಿ ಮಾತನಾಡಿ ಪರಿಸರ ವಿಕೋಪ, ನೀರಿನ ಪ್ರವಾಹ ಇತ್ಯಾದಿ ತಡೆಗಟ್ಟಲು ಪರಿಸರ ಸ್ನೇಹಿಯಾಗಿ. ಸಭಾದ 18 ಸಾವಿರ ಮಂದಿ ಒಂದೊಂದು ಗಿಡ ನೆಟ್ಟು ಪೋಷಿಸಿ, ಬೆಳೆಸಿ, ಉತ್ತಮ ಪರಿಸರ ಉಳಿಸಲು ಕೇಳಿಕೊಂಡರು. ಗಿಡ ನೆಟ್ಟು ಪೋಷಿಸಿ ಬೆಳೆಸಿ ಮರದ ದಾಖಲೆ ನೀಡಿದ ಎಲ್ಲರಿಗೂ ಬಹುಮಾನ ನೀಡಲಾಗುವುದು ಎಂದು ಕೆಥೋಲಿಕ್ ಸಭಾದ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಸಂತೋಷ್ ಡಿಸೋಜಾ ಭರವಸೆ ನೀಡಿದರು.
ಸುಮಾರು 200 ಮಂದಿಗೆ ಶುಶ್ರೂಷೆ, ಮಾಡುತ್ತಿರುವ ಮೌಂಟ್ ರೋಜರಿ ಭಗಿನಿಯರ ಮೇಳದ ಸ್ಥಾಪಕ ವಂ.ಫಾ.ಮೊನ್ಸಿಂಜೊರ್ ಎಡ್ವಿನ್ ಪಿಂಟೋ ರನ್ನು ಸಂಮಾನಿಸಲಾಯಿತು. ಸೋನಿಯಾ ಡಿಸೋಜಾ ಅಭಿನಂದನಾ ಪತ್ರ ವಾಚಿಸಿದರು.
ಸರಕಾರ 33 ಶೇಕಡಾ ಕಾಡು, ಹಾಳು ಮಾಡಿದ ಪರಿಸರ ಉಳಿಸಲು ಸಸಿಗಳನ್ನು ವಿತರಿಸುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ಬದುಕುವ ಅನಿವಾರ್ಯತೆ ಇದೆ ಎಂದು ಮಂಗಳೂರು ಡಿ.ಎಫ್.ಓ. ಆಂಟೋನಿ ಮರಿಯಪ್ಪ, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನುಡಿದರು.
ವೇದಿಕೆಯಲ್ಲಿ ವಲಯ ಧರ್ಮಗುರು ಅತಿ ವಂ. ಓನಿಲ್ ಡಿಸೋಜಾ, ವಂ.ಫಾ.ದೀಪಕ್ ನೊರೊನ್ಹಾ, ವಂ.ಫಾ.ಮೆಲ್ವಿನ್ ನೊರೊನ್ಹಾ, ಸುಪೀರಿಯರ್ ಜನರಲ್ ಸಿ.ಸುನೀತಾ ಡಿಸೋಜಾ, ಪರಿಸರ ಸಮಿತಿಯ ಲ್ಯಾನ್ಸಿ ಮಸ್ಕರೇನಸ್, ಮೇಬಲ್ ಲೋಬೊ, ಲ್ಯಾನ್ಸಿ ಲೋಬೋ, ರೋಶನ್ ಮಿರಾಂದಾ ಹಾಜರಿದ್ದರು.
ಮೂಡುಬಿದಿರೆ ವಲಯ ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ಸ್ವಾಗತಿಸಿದರು. ಮನೋಹರ್ ಕುಟಿನ್ಹ ಕಾರ್ಯಕ್ರಮ ನಿರ್ವಹಿಸಿದರು. ಪಾವ್ಲ್ ರೋಲ್ಫಿ ಡಿಕೋಸ್ತ ಕಾರ್ಯಕ್ರಮ ಸಂಯೋಜಿಸಿದರು. ಮೂಡುಬಿದಿರೆ ವಲಯದ ಹನ್ನೊಂದು ಘಟಕದ ಪದಾಧಿಕಾರಿಗಳು ಹಾಜರಿದ್ದರು. ಮಂಗಳೂರು ಕೆಥೋಲಿಕ್ ಸಭಾ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೆರೊ ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here