ಜಿ ಎಸ್ ಬಿ ಸಮಾಜದ ವೈದಿಕ ಕ್ರೀಡೋತ್ಸವ 2026

0
5

ಬಂಟ್ವಾಳದ ಹತ್ತಿರ ಬರಿಮಾರು ಮಹಾಮಾಯಾ ದೇವಸ್ಥಾನದ ಮೈದಾನದಲ್ಲಿ 7ನೇ ವರ್ಷದ ಜಿ ಎಸ್ ಬಿ ಸಮಾಜದ ವೈದಿಕ ಕ್ರೀಡೋತ್ಸವದ ಸಂಪನ್ನ ಗೊಂಡಿತ್ತು.

ಜಿ ಎಸ್ ಬಿ ಸಮಾಜದ ವೈದಿಕ ಕ್ರೀಡೋತ್ಸವ 2026 ಕ್ರಿಕೆಟ್ ಟೂರ್ನಿಯ 7 ನೇ ಆವೃತ್ತಿಯು ಇತ್ತೀಚಿಗೆ ಬರಿಮಾರು ಮಹಾಮಾಯಾ ದೇವಸ್ಥಾನ ಮೈದಾನದಲ್ಲಿ ಬೆಳಿಗ್ಗೆ ಆರಂಭ ಗೊಂಡು ಹೊನಲು ಬೆಳಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಈ ಕ್ರೀಡೋತ್ಸವದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಯ ಆಗಮಿಸಿದ ವೈದಿಕರು ಅಪಾರ ಉತ್ಸಾಹದೊಂದಿಗೆ ಆಟವಾಡಿದರು.

ಒಟ್ಟು ಎಂಟು ತಂಡಗಳು ಭಾಗವಹಿಸಿದ್ದ ಈ ಕ್ರೀಡೋತ್ಸವದಲ್ಲಿ ಈ ಟೂರ್ನಿಯಲ್ಲಿ ಅನೇಕ ರೋಚಕ ಪಂದ್ಯಗಳು ಸಾಗಿ , ಕೊನೆಯಲ್ಲಿ ಫೈನಲ್ ಹಣಾಹಣಿಯಲ್ಲಿ ಸುಧೇಶ್ ಭಟ್ ಅವರ ಸಮರ್ಥ ನಾಯಕತ್ವದಲ್ಲಿ ಆಡಿದ ಭಟ್ಜಿಸ್ ಸೂಪರ್ ಕಿಂಗ್ಸ್ ತಂಡವು ಸಾರಸ್ವತ್ ವೈದಿಕ್ಸ್ ತಂಡವನ್ನು ಸೋಲಿಸಿ ವೈದಿಕ ಕ್ರೀಡೋತ್ಸವದ 7 ಆವೃತ್ತಿಯಲ್ಲಿ 5 ನೇ ಬಾರಿ ಚಾಂಪಿಯನ್ಸ್ ಆದರು.ಸಾರಸ್ವತ್ ವೈದಿಕ್ಸ್ ತಂಡವು ರನ್ನರ್-ಅಪ್ ಪಟ್ಟಕ್ಕೆ ತೃಪ್ತಿ ಪಟ್ಟಿತು.

ಟೂರ್ನಿಯಲ್ಲಿ ಸಾರಸ್ವತ್ ವೈದಿಕ್ಸ್ ತಂಡದ ಜಿ.ಕೆ ಭಟ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ, ಭಟ್ಜಿಸ್ ಸೂಪರ್ ಕಿಂಗ್ಸ್ ತಂಡದ ಸುಧೇಶ್ ಭಟ್ ಇವರಿಗೆ ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿ ಲಭಿಸಿತು ಅದೇ ತಂಡದ ವೇದಾಂತ್ ಭಟ್ ಇವರು ಟೂರ್ನಿಯ ಬೆಸ್ಟ್ ಬೌಲರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಟೂರ್ನಿಯಲ್ಲಿ ಮಹಾಮಾಯಾ ಬರಿಮಾರು ತಂಡವು ಮೂರನೇ ಹಾಗೂ ರಾಯಲ್ ಚಾಲೆಂಜರ್ಸ್ ತಂಡವು ನಾಲ್ಕನೇ ಸ್ಥಾನವನ್ನು ಪಡೆದು ಕೊಂಡಿತು. ಈ ಟೂರ್ನಿಯ ಮಧ್ಯದಲ್ಲಿ ಮಂಗಳೂರಿನ ವೀರ ವೆಂಕಟೇಶ ದೇವಸ್ಥಾನದ ಸ್ವಯಂ ಸೇವಕರ ಹಾಗೂ ವೈದಿಕರ ತಂಡಗಳ ನಡುವೆ ಪ್ರದರ್ಶನ ಪಂದ್ಯವೂ ನಡೆಯಿತು.

ಕಾರ್ಯಕ್ರಮದ ವೇಳೆ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗಾಗಿ ರುಚಿಕರವಾದ ಆಹಾರ ಮತ್ತು ತಂಪು ಪಾನೀಯಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಕ್ರೀಡೆಯ ಮೂಲಕ ಒಗ್ಗಟ್ಟು,ಸ್ನೇಹಭಾವ ಹಾಗೂ ವೈದಿಕರ ಮಧ್ಯದ ಬಾಂಧವ್ಯ ಮತ್ತಷ್ಟು ಬಲಪಡಿಸುವಲ್ಲಿ ಈ ಕ್ರೀಡೋತ್ಸವವು ಪ್ರಮುಖ ಪಾತ್ರವಹಿಸಿದೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.

ಪಂದ್ಯಾಟದ ಕೊನೆಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವೈದಿಕ ಕ್ರೀಡೋತ್ಸವದ ಪ್ರಮುಖ ಸಂಯೋಜಕರಾದ ಕಾಶೀನಾಥ್ ಆಚಾರ್ಯ ಮಂಗಳೂರು, ಬರಿಮಾರು ಮಹಾಮಾಯಾ ದೇವಸ್ಥಾನದ ಧರ್ಮದರ್ಶಿಗಳಾದ ರಾಕೇಶ್ ಪ್ರಭು ಹಾಗೂ ರವೀಶ್ ಪ್ರಭು ಬರಿಮಾರು ಬಹುಮಾನವನ್ನು ವಿತರಿಸಿದರು. ಗೋಪಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕ್ ಪ್ರಭು,ದೇವಣ್ಣ ಭಟ್ ಸಹಕರಿಸಿದರು.

LEAVE A REPLY

Please enter your comment!
Please enter your name here