ಉಡುಪಿ: ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ಉಡುಪಿ ಗಾಂಧಿ ಆಸ್ಪತ್ರೆ ಇದರ ವತಿಯಿಂದ ಡಯಾಬಿಟೀಸ್ , ರಕ್ತದ ಒತ್ತಡ , ರಕ್ತದ ಗುಂಪಿನ ವರ್ಗೀಕರಣ , ಬಿಪಿ ಇನ್ನಿತರ ವೈದ್ಯಕೀಯ ಸೇವೆಯನ್ನು ಡಾ. ರಾಮಚಂದ್ರ ಕಾಮತ್ ಮಣಿಪಾಲ್, ಡಾ. ಜಯಪ್ರಕಾಶ್ ಬೆಳ್ಳೆ , ಡಾ. ಎಮ್ .ಎಸ್. ಕಾಮತ್ ಉಡುಪಿ, ಪ್ರದೀಪ್ ಕಾಮತ್ ಸಹಕರಿಸಿದರು. ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಹರಿಚಂದ್ರ, ವ್ಯಾಸ ತಂತ್ರಿ ಉಚಿತ ಅಂಬುಲೆನ್ಸ್ ಸೇವೆ ನೀಡುವಲ್ಲಿ ಸಹಕರಿಸಿದರು. ವೈದ್ಯಕೀಯ ಶಿಬಿರದಲ್ಲಿ ಸುಮಾರು 5OO ಕ್ಕೂ ಹೆಚ್ಚಿನ ಜನ ಇದರ ಸದುಪಯೋಗ ಪಡೆದುಕೊಂಡರು.
ಐ ನೀಡ್ಸ್ ಅಪ್ಟಿಕಲ್ಸ್ ಮಣಿಪಾಲ್ ಇದರ ನಿರ್ದೇಶಕ ಗಜಾನನ ನಾಯಕ್ ಇವರ ವತಿಯಿಂದ ಉಚಿತ ನೇತ್ರ ಕಣ್ಣಿನ ತಪಾಸಣೆ , ರೀಯಾಯತಿ ದರದಲ್ಲಿ ಕನ್ನಡಕ ವಿತರಣೆ ನಡೆಯಿತು. ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನೆಡೆಸಿಕೊಟ್ಟ ಎಲ್ಲಾ ವೈದ್ಯರನ್ನು ಗೌರವಿಸಲಾಯಿತು.