ದಾವಣಗೆರೆ: ದಾವಣಗೆರೆಯ ಗೌಡ ಸಾರಸ್ವತ ಸಮಾಜದ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವದ ವಿಜೃಂಭಣೆಯ ೫ ದಿನಗಳ ಕಾಲ ನಡೆದ ಸಮಾರಂಭ ಸುಸಂಪನ್ನಗೊಂಡಿತು ಎಂದು ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಆಗಸ್ಟ್ ೨೭ ರಿಂದ ೩೧ ರವರೆಗೆ ನಗರದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಮಹಿಳೆಯರ, ಪುರುಷರ, ಮಕ್ಕಳ ನಾಟಕ, ನೃತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಕ್ರಿಕೇಟ್ ಸೇರಿದಂತೆ ಆಟೋಟ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಯಶಸ್ವಿಯಾಗಿ ನಡೆಯಿತು ಎಂದು ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಮಿತಾ ಡಾ. ವೇಣುಗೋಪಾಲ್ ಪೈಯವರು ಪ್ರಕಟಿಸಿದ್ದಾರೆ.
ಆಗಸ್ಟ್ ೨೭ ರಂದು ಸಮಾಜದ ಸುವರ್ಣ ಮಹೋತ್ಸವ ಉದ್ಘಾಟನೆ, ಸಮಾಜದ ಲಾಂಛನ ಲೋಕಾರ್ಪಣೆ ನಡೆಯಿತು. ಆಗಸ್ಟ್ ೩೧ ರಂದು ಭಾನುವಾರ ರಾತ್ರಿ ಶ್ರೀ ಗಣಪತಿ ವಿಸರ್ಜನೆ ಹಮ್ಮಿಕೊಳ್ಳಲಾಗಿದ್ದು ಅಂತರಾಷ್ಟಿçÃಯ ಖ್ಯಾತ ಸಂಗೀತಗಾರರಾದ ಬೆಂಗಳೂರಿನ ಶಂಕರ ಶ್ಯಾನಭಾಗರವರ ಎರಡು ಗಂಟೆಗಳ ಕಾಲ ಭಕ್ತಿಗೀತೆ, ರಾಷ್ಟçಗೀತೆ, ಸುಗಮ ಸಂಗೀತ ಸಮಾರಂಭ ಯಶಸ್ವಿಯಾಯಿತು. ೫ ದಿನಗಳ ಕಾಲ ಪ್ರತೀದಿನ ನಿತ್ಯಪೂಜೆ, ಗಣಹೋಮ, ರಂಗಪೂಜೆ, ಮೂಡಗಣಪತಿ ಹೂವಿನ ಅಲಂಕಾರ ಪೂಜೆ, ಅನ್ನಸಂತರ್ಪಣೆ, ಸಾಲಿಗ್ರಾಮ ಗಣೇಶ್ ಶೆಣೈಯವರ ಮಹಾಭಾರತ, ರಾಮಾಯಣದ ಬಗ್ಗೆ ಉಪನ್ಯಾಸ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದರು.