ಕಾರ್ಕಳ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ

0
30

ಕಾರ್ಕಳ: ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಗುರು ಪೂರ್ಣಿಮಾವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಿತು.

ಮಂದಿರದಲ್ಲಿ ವಿಶೇಷ ಮಹಾಪೂಜೆ ಸಲ್ಲಿಸಲಾಯಿತು. ನಂತರ, ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಸಾಯಿಬಾಬಾ ಅವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾದರು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿ ಮಂದಿರದ ಸ್ಥಾಪಕರಾದ ದಿವಂಗತ ಚಂದ್ರಹಾಸ ಸುವರ್ಣ ಅವರನ್ನು ಸ್ಮರಿಸಲಾಯಿತು. ಮಂದಿರದ ಆಡಳಿತ ಮೊಕ್ತೇಸರರಾದ ಅಭಿಷೇಕ್ ಸುವರ್ಣ, ನಿವೃತ್ತ ಲೆಕ್ಕ ಪರಿಶೋಧಕರೂ ಹಾಗೂ ಪ್ರಮುಖರಾದ ಕೆ. ಕಮಲಾಕ್ಷ ಕಾಮತ್, ಪ್ರಧಾನ ಅರ್ಚಕರು ವೇದಮೂರ್ತಿ ಶ್ರೀಲಕ್ಷ್ಮಿ ನಾರಾಯಣ ಭಟ್, ವ್ಯವಸ್ಥಾಪಕರಾದ ಪ್ರಫುಲ್ಲ ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here