ಉಡುಪಿ ಸೇರಿದಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 45 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

0
41

ರಾಷ್ಟ್ರ-ಧರ್ಮ ರಕ್ಷಣಾ ಕಾರ್ಯದಲ್ಲಿ ಸಕ್ರಿಯರಾಗಲು ಮಹೋತ್ಸವದಲ್ಲಿ ಭಾಗವಹಿಸಿ– ಹಿಂದೂ ಜನಜಾಗೃತಿ ಸಮಿತಿಯ ಕರೆ

ಉಡುಪಿ – ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಅವರಂತಹ ಮಹಾನ್ ನಾಯಕರೂ ಸಮಾಜದ ಮೇಲಾಗುತ್ತಿದ್ದ ಅನ್ಯಾಯವನ್ನು ನಾಶ ಮಾಡಲು ಯುದ್ಧ ಮಾಡಬೇಕಾಯಿತು. ಈ ಕಾರ್ಯದಲ್ಲಿ ಅವರಿಗೆ ಗುರು ಪರಂಪರೆಯ ಮಾರ್ಗದರ್ಶನವೂ ದೊರಕಿತು. ಇದರಿಂದ ರಾಷ್ಟ್ರ ರಕ್ಷಣೆಗೂ ಗುರು-ಶಿಷ್ಯ ಪರಂಪರೆ ಅಗತ್ಯ ಎಂಬುದು ಸ್ಪಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರ ಪ್ರೇಮವನ್ನು ಹೆಚ್ಚಿಸುವ ಗುರು ಪೂರ್ಣಿಯನ್ನು ಆಚರಿಸುವ ಉದ್ದೇಶದಿಂದ, ಗುರುವಾರ, ಜುಲೈ 10, 2025 ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರು ಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಲಾಗಿದೆ.

ಈ ವರ್ಷ ಈ ಮಹೋತ್ಸವಗಳು ದೇಶಾದ್ಯಂತ 45 ಸ್ಥಳಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕಿದಿಯೂರು ಹೋಟೆಲ್ ನ ಶೇಷಶಯನ ಸಭಾಗೃಹದಲ್ಲಿ ಜರುಗಲಿವೆ.

ಈ ಮಹೋತ್ಸವದಲ್ಲಿ ಶ್ರೀವ್ಯಾಸ ಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಭಾವಚಿತ್ರದ ಪೂಜೆ, ಸಂತರ ಸಂದೇಶ, ಕಿರುಚಿತ್ರ, ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳು ಮತ್ತು ಸಾಮೂಹಿಕ ರಾಮ ನಾಮ ಜಪ ನಡೆಯಲಿದೆ. ವಿವಿಧ ಗಣ್ಯರ ವಿಚಾರಗಳು ಹಾಗೂ ‘ರಾಷ್ಟ್ರ ಮತ್ತು ಧರ್ಮರ ಕ್ಷಣೆಗಾಗಿ ಸಾಧನೆ ಮತ್ತು ಯುದ್ಧ ಕಾಲೀನ ಕರ್ತವ್ಯ’ ಎಂಬ ವಿಷಯದ ಕುರಿತು ಗಣ್ಯರ ವಿಶೇಷ ಮಾರ್ಗದರ್ಶನವೂ ಇರಲಿದೆ. ಇಲ್ಲಿ ಆಧ್ಯಾತ್ಮಿಕ, ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಪ್ರದರ್ಶನ ಮತ್ತು ಫ್ಲೆಕ್ಸ್ ಫಲಕಗಳ ಪ್ರದರ್ಶನವನ್ನೂ ಏರ್ಪಡಿಸಲಾಗುವುದು. ಆದ್ದರಿಂದ, ಎಲ್ಲ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಕುಟುಂಬ ಸಮೇತರಾಗಿ ಈ ಅಮೂಲ್ಯ ಅವಕಾಶದ ಲಾಭ ಪಡೆಯುವಂತೆ ಹಿಂದೂ ಜನಜಾಗೃತಿ ಸಮಿತಿಯು ಆಹ್ವಾನಿಸಿದೆ.

‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ’

ದೇಶ ವಿದೇಶಗಳ ಭಕ್ತರೂ ಗುರುಪೂರ್ಣಿಯ ಲಾಭ ಪಡೆಯಲು, ಹಿಂದೂ ಜನಜಾಗೃತಿ ಸಮಿತಿಯು ಇಂಗ್ಲಿಷ್, ಕನ್ನಡ, ತೆಲುಗು ಮತ್ತು ಬಂಗಾಳಿ ಭಾಷೆಗಳಲ್ಲಿ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿದೆ. ಕನ್ನಡ ಭಾಷೆಯಲ್ಲಿ ಮಹೋತ್ಸವವು ಜುಲೈ 10 ರಂದು ಸಂಜೆ 5 ಗಂಟೆಗೆ youtube.com/Hjskarnataka ಈ ಯೂಟ್ಯೂಬ್ ಲಿಂಕ್‌ನಲ್ಲಿ ನೇರ ಪ್ರಸಾರವಾಗಲಿದೆ. ತಾವೆಲ್ಲರೂ ಇದರ ಲಾಭವನ್ನು ತಪ್ಪದೇ ಪಡೆಯಬೇಕು.

LEAVE A REPLY

Please enter your comment!
Please enter your name here