ಹೆಬ್ರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವಪುರ-1ರಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಸೆಪ್ಟೆಂಬರ್ 06 ರಂದು ನಡೆಯಿತು, ವರ್ಷಪೂರ್ತಿ ಮಕ್ಕಳಿಗೆ ವಿದ್ಯೆ,ಬುದ್ಧಿ ಮತ್ತು ಸಂಸ್ಕಾರ ಕಲಿಸುವ ಶಿಕ್ಷಕರನ್ನು ಪೋಷಕರು ಹಾಗೂ ಊರವರು ಸೇರಿ ಗೌರವಿಸುವ ವಿನೂತನ ಕಲ್ಪನೆಯ ಈ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಸ್ಥಳೀಯ ಗಣ್ಯರು, ಊರವರು ಹಾಗೂ ಆಡಳಿತದ ಪ್ರಮುಖರು ಪಾಲ್ಗೊಂಡು ಶಾಲೆಯ ಶಿಕ್ಷಕರನ್ನು ಸನ್ಮಾನಿಸಿದರು,ಪೋಷಕರು ತಮ್ಮ ಶಿಕ್ಷಕರ ವ್ಯಕ್ತಿತ್ವವನ್ನು ನೆನೆದು ಮೆಚ್ಚುಗೆಯ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ವಹಿಸಿದ್ದರು, ಉದ್ಘಾಟನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಗುಲಾಬಿ ಯವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಕುಂದಾರು ರವಿಶಂಕರ್ ರಾವ್ ಭಾಗವಹಿಸಿ ಮಾತನಾಡಿದರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಪೂಜಾರಿ,ಗ್ರಾಮ ಪಂಚಾಯತ್ ಸದಸ್ಯೆ ಸುಮಿತ್ರ ನಾಯ್ಕ್, ಶ್ವೇತಾ ರಾಘವೇಂದ್ರ,ಸುಗಂಧಿ ನಾಯ್ಕ್,ರಂಜಿತಾ ಪ್ರಭು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಕುಮಾರ್,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿ,ಶಿಕ್ಷಣ ಇಲಾಖೆ ಕ್ಲಸ್ಟರ್ ಸಿ.ಆರ್.ಪಿ ಪ್ರೀತೇಶ್ ಶೆಟ್ಟಿ,ದಿವಾನಂದ ಸಾಲ್ಯಾನ್,ಸುಭಾಷ್ ಚಂದ್ರ ನಾಯ್ಕ್,ಪ್ರತಾಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಪೂಜಾರಿ ಶಿವಪುರ ಕಾರ್ಯಕ್ರವನ್ನು ನಿರೂಪಿಸಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅನಸೂಯಾ ಎಲ್ಲರನ್ನು ಸ್ವಾಗತಿಸಿ,ಎಸ್.ಡಿ.ಎಂ.ಸಿ ಸದಸ್ಯರಾದ ನಾಗರಾಜರವರು ವಂದಿಸಿದರು.

