ಗುರುತತ್ವವಾಹಿನಿ ಮಾಲಿಕೆ 43 ನಾರಾಯಣ ಗುರುಗಳು ಜ್ಞಾನದ ಬೆಳಕಿನ ದೀಪ ಬೆಳಗಿಸಿದರು : ಸಂತೋಷ್ ಕುಮಾರ್

0
133

ಮದ್ವ : ಮಾನವ ಜೀವನದಲ್ಲಿ ಜ್ಞಾನವೇ ಬೆಳಕು, ಆದರೆ ಈ ಜ್ಞಾನ ಬೆಳಕು ಬೆಳಗುವ ಮೂಲ ದೀಪವೇ ಶಿಕ್ಷಣ. ಶಿಕ್ಷಣವೇ ವ್ಯಕ್ತಿಯ ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ನೆರವಾಗುವ ಪ್ರಮುಖ ಸಾಧನವಾಗಿದೆ. ಇಂತಹ ಮಹತ್ವದ ವಿದ್ಯೆಯ ಪ್ರಭಾವವನ್ನು ಗುರುತಿಸಿ ಅದನ್ನು ಸಾಮಾನ್ಯ ಜನತೆಗೆ ನೈಜ ಅರ್ಥದಲ್ಲಿ ನೀಡಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಪೂಂಜಾಲಕಟ್ಟೆ ನಾರಾಯಣಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ತಿಳಿಸಿದರು.

ಅವರು ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾದ ರಚನಾ ಮತ್ತು ಸಹನಾ ಕರ್ಕೇರ ಮಧ್ವ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 43 ರಲ್ಲಿ ಗುರು ಸಂದೇಶ ನೀಡಿದರು

ಕಾರ್ಯಕ್ರಮದ ಮೊದಲಾಗಿ ಭಜನಾ ಸಂಕೀರ್ತನೆ ಸೇವೆ ನಡೆಯಿತು. ಹಾರ್ಮೋನಿಯಂ ನಲ್ಲಿ ನಾಗೇಶ್ ಕೊಡಕಲ್, ತಬಲಾ ದಲ್ಲಿ ಸಾತ್ವಿಕ್ ದೇರಾಜೆ ಸಹಕರಿಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ಟಾಳ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ದ್ವಿತೀಯ ಉಪಾಧ್ಯಕ್ಷರಾದ ನಾಗೇಶ್ ನೈಬೆಲು, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮದ್ವ, ಮಧುಸೂದನ್ ಮಧ್ವ, ಲೋಹಿತ್ ಕನಪಾದೆ,ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ, ರಾಜೇಶ್ ಸುವರ್ಣ, ಸದಸ್ಯರಾದ ನಾಗೇಶ್ ಏಲಬೆ, ಕುಶಿ ಬಿ.ಸಿರೋಡ್, ಬಿಂದು ಬಿ.ಸಿ ರೋಡ್, ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here