ದಿನಾಂಕ 24 /11/2025 ರಂದು ಮೂಡುಬಿದಿರೆ ತಾಲೂಕಿನ ಹಂಡೆಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು .ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷರು ಶ್ರೀ ರಾಜೇಶ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿಅಮಿತ ನಾಯ್ಕ ನಡೆಸಿ ನಡೆಸಿಕೊಟ್ಟರು .ಈ ಕಾರ್ಯಕ್ರಮದಲ್ಲಿ ಪಾಲಡ್ಕಗ್ರಾಮ ಪಂಚಾಯತ್ ಸದಸ್ಯರುಗಳಾದ ಸುರೇಶ್ ತಾಳಿದಡಿ ,ಸವಿತಾ ತಾಳಿದಡಿ ಹಾಗೂ ಸುಧೀರ್ ಶೆಟ್ಟಿ, ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕ ಮಟ್ಟದ ಸಮಿತಿ ಸದಸ್ಯರಾದ ಗಣೇಶ್ ಆಚಾರ್ಯ ಹಾಜರಿದ್ದರು. ಇಲಾಖೆಯಿಂದ ಪ್ರತಿಭಾ ಕಾರಂಜಿ ತಾಲೂಕು ನೋಡಲು ಅಧಿಕಾರಿ ಶ್ರೀ ರಾಜೇಶ್ ಭಟ್, ಸಿ ಆರ್ ಪಿ ಮಹೇಶ್ವರಿ, ಸಿ ಆರ್ ಪಿ ನಾಗರತ್ನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಸುಧಾಕರ್ ಸಾಲಿಯನ್ ಹಾಗೂ ಉಪಾಧ್ಯಕ್ಷರು ಮೇಲ್ವಿನ್ ಅಲ್ಬುಕರ್ಕ್ ಉಪಸ್ಥಿತರಿದ್ದರು. ಸುಮಾರು 16 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಎಲ್ಲಾ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು .ಈ ಕಾರ್ಯಕ್ರಮವು ಯಶಸ್ವಿಯಾಗಲು ಹಳೆ ವಿದ್ಯಾರ್ಥಿ ಸಂಘ ವರ್ಣ ಬೆಟ್ಟು ಸಂಪೂರ್ಣ ಸಹಕಾರವನ್ನು ನೀಡಿತು.

