
ಹೆಬ್ರಿ : ಹೆಬ್ರಿಯ ಎಸ್ ಆರ್ ಕಾಲೇಜಿನ ವಿದ್ಯಾರ್ಥಿ ಯುವ ಕಲಾವಿದ ಪರೀಕ್ಷಿತ್ ಆಚಾರ್ ರಚಿಸಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರ ವರ್ಣಚಿತ್ರವನ್ನು ಶುಕ್ರವಾರ ಹಸ್ತಾಂತರಿಸಿದರು. ಪರೀಕ್ಷಿತ್ ಆಚಾರ್ ಚಿತ್ರಕಲಾವಿದ ಪೆರ್ಡೂರು ಜೋಗಿಬೆಟ್ಟು ಸುಕೇಶ್ ಅವರ ಶಿಷ್ಯ. ಯುವ ಕಲಾವಿದ ಪರೀಕ್ಷಿತ್ ಆಚಾರ್ ಅವರನ್ನು ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಗೌರವಿಸಿದರು.